Thursday, August 11, 2022

Latest Posts

ಚೀನಾದಿಂದ ಹೊರಬಂತು ಯಾಹೂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಇಂಟರ್ ನೆಟ್ ದೈತ್ಯ ಸಂಸ್ಥೆ ಯಾಹೂ ಚೀನಾದಿಂದ ಹೊರಬಂದಿದೆ.
ವ್ಯಾಪಾರ ನಡೆಸುವುದಕ್ಕೆ ಚೀನಾದಲ್ಲಿ ವಾತಾವರಣ ಬಿಗುವಾಗಿರುವುದು ಹಾಗೂ ಕಾನೂನಿನ ಬಿಗಿ ನಿಯಮಗಳೇ ಯಾಹೂದ ಈ ನಿರ್ಧಾರಕ್ಕೆ ಕಾರಣ. ನ.1ರಿಂದ ಚೀನಾದಲ್ಲಿ ತನ್ನ ಸೇವೆಯನ್ನು ರದ್ದು ಮಾಡಿರುವುದಾಗಿ ಕಂಪನಿ ತಿಳಿಸಿದೆ.
ಅದಾಗಲೇ ಯಾಹೂ ತನ್ನ ಇಮೇಲ್ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಚೀನಾದಲ್ಲಿ ಸ್ಥಗಿತಗೊಳಿಸಿತ್ತು. ಹೀಗಾಗಿ ಚೀನಾದಿಂದ ಹೊರಬೀಳುವ ಅದರ ನಿರ್ಧಾರ ಏಕಾಏಕಿ ಆಗಿದ್ದೇನಲ್ಲ.
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೆಲಸ ಮಾಡುವ ಕಂಪನಿಗಳು ತಮ್ಮ ಮಾಹಿತಿಯನ್ನು ಹೇಗೆ ಸಂಗ್ರಹಿಸಬೇಕು ಹಾಗೂ ಅವನ್ನು ವರ್ಗಾವಣೆ ಮಾಡುವಾಗ ಯಾವ ನಿಯಮ ಅನುಸರಿಸಬೇಕು ಎಂಬೆಲ್ಲದರ ಬಗ್ಗೆ ಚೀನಾ ಇತ್ತೀಚೆಗೆ ಅನುಷ್ಠಾನಕ್ಕೆ ತಂದಿದ್ದ ಬಿಗಿ ನಿಯಮಗಳು ಈ ಬಗೆಯ ನಿರ್ಧಾರಕ್ಕೆ ಪ್ರೇರೇಪಿಸುತ್ತಿವೆ.
ಕಳೆದ ತಿಂಗಳಷ್ಟೇ ವೃತ್ತಿಪರರ ಜಾಲದಲ್ಲಿ ಸಕ್ರಿಯವಾಗಿರುವ ಲಿಂಕ್ಡಿನ್ ಸಹ ಚೀನಾದಲ್ಲಿ ತನ್ನ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸಿ ಹೊರಬಂದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss