spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಾಹೂನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ ರಿಲೀಸ್: ಮೊದಲ ಸ್ಥಾನ ಯಾರಿಗೆ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಸರ್ಚ್ ಆಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರಿಕೆಟಿಗ ವಿರಾಟ್ ಕೋಹ್ಲಿ.
ಈ ಬಗ್ಗೆ ಯಾಹೂ 2021ರ ಹೆಚ್ಚು ಸರ್ಚ್ ಆದ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಬಳಿಕ ಹೆಚ್ಚು ಸರ್ಚ್ ಆಗಿರುವ ಕ್ರೀಡಾ ಕ್ಷೇತ್ರದ ತಾರೆ ವಿರಾಟ್ ಕೋಹ್ಲಿ.
ಇನ್ನು ಪ್ರಧಾನಿ ಮೋದಿ 2017ರಿಂದ ಸತತವಾಗಿ ಅತಿ ಹೆಚ್ಚು ಹುಡುಕಲಾದ ವ್ಯಕ್ತಿಯಾಗಿ ಪ್ರಥಮ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಮಾತ್ರ ಈ ಸ್ಥಾನವನ್ನು ಸುಶಾಂತ್ ಸಿಂಗ್ ರಜಪುತ್ ಹೆಸರಿತ್ತು.
ಈ ಪಟ್ಟಿಯ ಮೂರನೇ ಸ್ಥಾನದಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಾಲ್ಕನೇ ಸ್ಥಾನವನ್ನು ನಟ ಸಿದ್ಧಾರ್ತ್ ಶುಕ್ಲಾ ಪಡೆದುಕೊಂಡಿದ್ದಾರೆ. ನಟ ಶಾರುಖ್ ಖಾನ್ ನ ಪುತ್ರ ಆರ್ಯನ್ ಖಾನ್ ಏಳನೇ ಸ್ಥಾನ ಪಡೆದಿದ್ದಾರೆ.
ಜತೆಗೆ ಸಿನಿಮಾ ರಂಗದಲ್ಲಿ ನಟ ಸಲ್ಮಾನ್ ಖಾನ್ ಗೆ 2ನೇ ಸ್ಥಾನ, ಅಲ್ಲು ಅರ್ಜುನ್ ಗೆ 3ನೇ ಸ್ಥಾನ, ನಟ ಪುನೀತ್ ರಾಜ್ ಕುಮಾರ್ ಗೆ 4ನೇ ಸ್ಥಾನ ಹಾಗೂ 5ನೇ ಸ್ಥಾನದಲ್ಲಿ ನಟ ದಿಲೀಪ್ ಕುಮಾರ್ ಸ್ಥಾನ ಪಡೆದಿದ್ದಾರೆ.
ಸಿನಿಮಾ ನಟಿಯರಲ್ಲಿ ಕರೀನಾ ಕಪೂರ್ ಖಾನ್ ದೇಶದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಫೀಮೇಲ್ ಸೆಲಿಬ್ರಿಟಿಯಾಗಿದ್ದಾರೆ. ಕಟ್ರೀನಾ ಗೆ 2ನೇ ಸ್ಥಾನ, ಪ್ರಿಯಾಂಕಾ ಚೋಪ್ರಾಗೆ 3ನೇ ಸ್ಥಾನ, ಆಲಿಯಾ ಭಟ್ ಗೆ 4ನೇ ಸ್ಥಾನ, ದೀಪಿಕಾ ಪಡುಕೋಣೆ 5ನೇ ಸ್ಥಾನದಲ್ಲಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss