1,000 ಉದ್ಯೋಗಿಗಳಿಗೆ ಗುಡ್‌ ಬೈ ಹೇಳಲಿದೆ ಯಾಹೂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟೆಕ್‌ ವಲಯದಲ್ಲಿ ವಜಾಗೊಳಿಸುವಿಕೆ ಮುಂದುವರೆದಿದ್ದು ಇದೀಗ ಹೆಸರಾಂತ ಟೆಕ್‌ ಕಂಪನಿ Yahoo Inc. ಈ ವಾರದಿಂದ ಸುಮಾರು 1,000 ಉದ್ಯೋಗಿಗಳನ್ನು ಅಥವಾ ಅದರ ಸರಿಸುಮಾರು 12% ಉದ್ಯೋಗಿಗಳನ್ನು ತೆಗೆದುಹಾಕಲಿದೆ. ಕಂಪನಿಯು ತನ್ನ ಜಾಹೀರಾತು ವಿಭಾಗವನ್ನು ಪುನರ್ರಚಿಸಲು ದೊಡ್ಡ ಯೋಜನೆ ಹಾಕಿಕೊಂಡಿದ್ದು. ಅದರ ಭಾಗವಾಗಿ ಈ ಉದ್ಯೋಗ ಕಡಿತಗಳನ್ನು ನಡೆಸಲಿದೆ.

ಅಪೊಲೊ ಗ್ಲೋಬಲ್ ಮ್ಯಾನೇಜ್‌ಮೆಂಟ್ ಇಂಕ್ ಒಡೆತನದ ಯಾಹೂ ಕಂಪನಿಯು 2023 ರ ಅಂತ್ಯದ ವೇಳೆಗೆ ಯಾಹೂ ಫಾರ್ ಬಿಸಿನೆಸ್ ಆಡ್ ಟೆಕ್ ಯೂನಿಟ್‌ನಲ್ಲಿ 50 ಶೇಕಡಾದಷ್ಟು ಹೆಡ್‌ಕೌಂಟ್‌ ಕಡಿಮೆ ಮಾಡಲು ಯೋಜಿಸಿದೆ. ಇದರ ಅನ್ವಯ ಯಾಹೂವಿನ 20 ಶೇಕಡಾಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊರಹಾಕಲು ಯೋಚಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಯಾಹೂ ಇದೀಗ ತನ್ನ ಜಾಹೀರಾತುಗಳ ಮೇಲೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದ್ದು ಹೊಸ ವಿಭಾಗವನ್ನು ರಚಿಸಲಿದೆ. ಇದು Yahoo Finance, Yahoo News ಮತ್ತು Yahoo ಸ್ಪೋರ್ಟ್ಸ್ ಸೇರಿದಂತೆ ಇತರ ವಿಭಾಗಗಳ ಜಾಹೀರಾತು ಮಾರಾಟದ ಕುರಿತು ಹೆಚ್ಚಿನ ಗಮನ ಹರಿಸಲಿದೆ.

ಆದರೆ ಈ ಬೆಳವಣಿಗೆಯ ಕುರಿತು ಕಂಪನಿಯ ಮುಖ್ಯಸ್ಥರು ಸ್ಪಷ್ಟಪಡಿಸಿರುವುದೇನೆಂದರೆ ಕಂಪನಿಯು ಲಾಭದಾಯಕತೆಯಲ್ಲೇ ಇದೆ. ಜಾಹೀರಾತು ವಿಭಾಗದ ಮರುರಚನೆಗೋಸ್ಕರ ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಹಿಂದೆ ಕಂಪನಿ ಉತ್ತುಂಗದಲ್ಲಿದ್ದಾಗಲೂ ನಾವು ಈ ರೀತಿಯ ಕ್ರಮಗಳನ್ನು ಕೈಗೊಂಡಿದ್ದೆವು. ಹೀಗಾಗಿ ಈ ಕಡಿತವು ಆರ್ಥಿಕ ಅನಿಶ್ಚಿತತೆಗಳಿಂದ ನಡೆಯುತ್ತಿರುವುದಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!