ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಾಕ್ಡೌನ್ ಸಮಯದಲ್ಲಿ ದೇಶದ ಅದೆಷ್ಟು ಬಡ ಜನರಿಗೆ ಸೋನು ಸೂದ್ ಮಾಡಿದ ಮಹತ್ವದ ಕೆಲಸ ಎಲ್ಲರಿಗು ತಿಳಿದ ವಿಷಯ. ಅವರ ಕಾರ್ಯಸಾಧನೆಗೆ ಇಡೀ ದೇಶಮಾತ್ರವಲ್ಲ ವಿಶ್ವಸಂಸ್ಥೆ ಸಹ ಶ್ಲಾಘಿಸಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ, ಯಾಹೂ (Yahoo india) ಜಾಲತಾಣ ಬಾಲಿವುಡ್ ನಟ ಸೋನು ಸೂದ್ ಅವರನ್ನು 2020ರ ‘ಹೀರೋ’ ಎಂದು ಘೋಷಿಸಿದೆ.
ಈ ಮೂಲಕ ಜನರ ಪಾಲಿನ ನಿಜ ಹೀರೋ ಆಗಿ ಸೋನು ಎಲ್ಲರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಲಾಕ್ಡೌನ್ ನಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲಾಗದೆ ಒದ್ದಾಡುತ್ತಿದ್ದರು. ಈ ವೇಳೆ ಅವರ ಸೇವೆಗೆ ನಿಂತಿದ್ದರು.
ಶಾಲಾ-ಕಾಲೇಜು ಬಂದ್ ವೇಳೆ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ನೀಡಿ ಸಹಾಯ ಮಾಡಿದ್ದರು. ಹೀಗೆ, ಕಳೆದ ಏಳಂಟು ತಿಂಗಳಿಂದ ನಟ ಸೋನು ಸೂದ್ ತನ್ನನ್ನು ತಾವು ಸಂಪೂರ್ಣವಾಗಿ ಜನಸೇವೆಗೆ ತೊಡಗಿಕೊಂಡು ಜನರ ಕಷ್ಟಗಳಿಗೆ ಸದಾ ಸ್ಪಂದಿಸಿ, ಅವರ ಜೀವನಕ್ಕೆ ಆಶಾಕಿರಣರಾಗಿದ್ದರು.
ಈ ರೀತಿ ಸೋನು ಸೋದ್ ಅವರು ಮಾಡಿದ ಸಮಾಜಮುಖಿ ಕೆಲಸಗಳನ್ನು ನೋಡಿದ ಜನರು ರಿಯಲ್ ಹೀರೋ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇದೀಗ, ಯಾಹೂ ಇಂಡಿಯಾ ಸೋನು ಸೂದ್ ಅವರನ್ನು 2020ನೇ ವರ್ಷದ ಹೀರೋ ಎಂದು ಘೋಷಿಸಿದೆ.