ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ ಮೈಸೂರು:
ಹೆಬ್ಬಾರ್ ಶ್ರೀ ವೈಷ್ಣವಸಭಾ ವತಿಯಿಂದ ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಯಜುರ್ವೇದದ ಯಜುರ್ ಉಪಾಕರ್ಮವನ್ನು ಸಾಮೂಹಿಕವಾಗಿ ಬ್ರಾಹ್ಮಣರು, ಯಜ್ಞೋಪವೀತಂ ಜನಿವಾರ ಬದಲಾಯಿಸಿಕೊಂಡು, ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ನೆರವೇರಿಸಿ ಆಚರಿಸಿದರು.
ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಸಂಧ್ಯಾವಂದನೆ ಪುಸ್ತಕ ಹಾಗೂ ಭಗವದ್ಗೀತೆ ಪುಸ್ತಕ ನೀಡಿ ಯಜುರ್ ಉಪಾಕರ್ಮ ಶುಭಾಶಯ ಕೋರಲಾಯಿತು,
ಮಾನವ ಜನ್ಮ ದೊಡ್ಡದು, ಅದು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂಬ ದಾಸರ ವಾಣಿಯಂತೆ ಜೀವನ ಅಂತ್ಯದವರೆಗೂ ನಾವೆಲ್ಲ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಬೇಕು. ಮತ್ತೊಬ್ಬರಿಗೆ ಕೇಡನ್ನು ಬಯಸದೆ ಉತ್ತಮ ವ್ಯಕ್ತಿಯಾಗಬೇಕು ಎಂದು ಹೆಬ್ಬಾರ್ ಶ್ರೀ ವೈಷ್ಣವ ಸಭಾದ ತಿರುಮಲಾಚಾರ್ ಹೇಳಿದರು.
`ಉಪ ಎಂದರೆ ಸಮೀಪ. ದೇವರ ಸಾಮಿಪ್ಯ ಹೊಂದಲು (ಮೋಕ್ಷ ಪ್ರಾಪ್ತಿ) ಪ್ರತಿಯೊಬ್ಬರು ದೇವರ ಮೇಲೆ ಶ್ರದ್ಧೆ ಇಟ್ಟು, ಉಪಾಸನೆ ಮಾಡಿ ಮೋಕ್ಷ ಪಡೆಯಲು ಪ್ರಯತ್ನಿಸಬೇಕು. ಸದಾಚಾರ, ಒಳ್ಳೆಯ ಚಾರಿತ್ರ÷್ಯ, ಸನ್ಮಾರ್ಗಗಳನ್ನು ಅಳವಡಿಸಿಕೊಂಡು ದೇವರನ್ನು ಪೂಜಿಸಿದರೆ ನಮ್ಮ ಜನ್ಮ ಸಫಲವಾಗುತ್ತದೆ’ ಎಂದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್,ಪ್ರಶಾಂತ್ಭರದ್ವಾಜ್, ಹೆಬ್ಬಾರ್ ಶ್ರೀ ವೈಷ್ಣವ ಸಭಾದ ತಿರುಮಲಾಚಾರ್,ರಂಗನ್ ಕೆ ಅಯ್ಯಂಗಾರ್ ,ವೆಂಕಟೇಶ್, ಡಾ.ಕಮಲಾ ರಾಮನ್,ನಿರ್ಮಲ,ಮಾಧುರಾವ್,ವೆಂಕಟೇಶ್,ರಂಗನಾಥ್ ಕೇಶವ ಪ್ರಸಾದ್,ರಾಮಶೇಷನ್,ಎಂ.ಆರ್.ವೆಂಕಟೇಶ್ ಇನ್ನಿತರರು ಹಾಜರಿದ್ದರು.