spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಕ್ಷರಂಗದ ಬಹುಮುಖ ಬಾಲಪ್ರತಿಭೆ ಮನೀಶ್ ರೈ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ತನ್ನೊಳಗಿರುವ ಕಲೆಗೆ ನಿರಂತರ ಪ್ರೋತ್ಸಾಹ ಲಭಿಸಿದಾಗ ಪ್ರತಿಭೆಯು ತಾನಾಗಿ ಅರಳುತ್ತದೆ. ಒಂದು ಮಗುವಿನ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿದ್ದು, ಸೂಕ್ತವಾದ ಗುರುವನ್ನು ಅರಸಿ ಅವರಿಗೆ ಪ್ರೋತ್ಸಾಹವನ್ನು ನೀಡಿದಾಗ ಅವರೊಳಗಿನ ಪ್ರತಿಭೆ ಬೆಳಗುತ್ತದೆ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ.
ಬದಿಯಡ್ಕ ಸಮೀಪದ ವಳಮಲೆಯ ಪ್ರತಿಭಾವಂತ ಬಾಲಪ್ರತಿಭೆ ಮನೀಶ್ ರೈ. 14 ವರ್ಷ ಪ್ರಾಯದ ಈತ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿ. ತನ್ನ ಎಳೆಯ ವಯಸ್ಸಿನಲ್ಲಿಯೇ ನೃತ್ಯಗುರುಗಳಾದ ಯೋಗೀಶ್ವರೀ ಜಯಪ್ರಕಾಶ್ ಅವರಲ್ಲಿ ಭರತನಾಟ್ಯವನ್ನು ಕಲಿತು ಪೆರಡಾಲ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ಗೆಜ್ಜೆಪೂಜೆಯೊಂದಿಗೆ ಮೊದಲ ಬಾರಿಗೆ ವೇದಿಕೆಯನ್ನು ಏರಿರುತ್ತಾನೆ. ಕಾರಣಾಂತರಗಳಿಂದ ನೃತ್ಯವನ್ನು ಮುಂದುವರಿಸಲು ಅಸಾಧ್ಯವಾಗಿ, ನಂತರ ತನ್ನ 10 ನೇ ವಯಸ್ಸಿನಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಮೂಲಕ ಯಕ್ಷರಂಗಕ್ಕೆ ಕಾಲಿರಿಸಿದನು. ಪ್ರಸಿದ್ಧ ನಾಟ್ಯಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ತಾಳಕ್ಕೆ ತಕ್ಕಂತೆ ಕುಣಿದು, ತರಬೇತಿಯನ್ನು ಪಡೆದು ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶಗೈದನು. ನಂತರ ಒಂದು ವರ್ಷಗಳ ಕಾಲ ಸಸಿಹಿತ್ಲು ಮೇಳ ಹಾಗೂ ಸುಂಕದಕಟ್ಟೆ ಮೇಳಗಳಲ್ಲಿ ಬಾಲಕಲಾವಿದನಾಗಿ ಅಭಿನಯಿಸಿರುವ ಈತ ರಂಗಸಿರಿ ಸಂಸ್ಥೆಯ ನೇತೃತ್ವದಲ್ಲಿ ನವರಾತ್ರಿ ದಿನಗಳಲ್ಲಿ ನಡೆಯುತ್ತಿರುವ `ದಸರಾ ಯಕ್ಷಪಯಣ’ದಲ್ಲಿ ಕಾಸರಗೋಡು ಹಾಗೂ ದಕ್ಷಿಣಕನ್ನಡ ವಿವಿದೆಡೆಗಳಲ್ಲಿ ನಡೆದ ಪ್ರದರ್ಶನದಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿದ್ದಾನೆ. ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಚಾಕಚಕ್ಯತೆಯನ್ನು ಹೊಂದಿರುವ ಈತ ದೇವೆಂದ್ರ, ಶಕಟಾಸುರ, ನೀಲಧ್ಟಜ, ಅಗ್ನಿ, ವಿಬೀಷಣ, ಚಂಡಾಸುರ, ಘೊರರೂಪಿ, ಧೇನುಕಾಸುರ ಮೊದಲಾದ ಪಾತ್ರಗಳಲ್ಲಿ ಮಿಂಚಿದ್ದಾನೆ. ತಾಳಮದ್ದಳೆಯಲ್ಲೂ ಹಿರಿಯ ಕಲಾವಿದರೊಂದಿಗೆ ಮಾತಿನ ಮೂಲಕ ತನ್ನ ಪಾತ್ರಕ್ಕೆ ತಕ್ಕ ಮೆರಗನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಮುಖವರ್ಣಿಕೆಯನ್ನೂ ಕರಗತ ಮಾಡಿಕೊಂಡ ಈತ ಓರ್ವ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಸಂದೇಹವಿಲ್ಲ.
ಶಾಲಾಮಟ್ಟದ ಆಟೋಟ ಸ್ಪರ್ದೆಗಳಲ್ಲಿಯೂ ಭಾಗವಹಿಸುತ್ತಿರುವ ಈತ ಚೆಸ್ ಆಡುವುದರಲ್ಲಿ ನಿಪುಣನಾಗಿದ್ದಾನೆ. ವಿವಿಧ ಕಡೆಗಳಲ್ಲಿ ನಡೆದ ಸಾಂಸ್ಕತಿಕ ಸ್ಪರ್ದೆಗಳಲ್ಲಿ ಬಹುಮಾನಗಳನ್ನು ಪಡೆಯುತ್ತಿದ್ದನು. ಶಾಲಾ ಕಲೋತ್ಸವದಲ್ಲಿ ಭಾಗವಹಿಸಿ ಉಪಜಿಲ್ಲಾಮಟ್ಟದ “ಮಣ್ಣಿನ ಆಕೃತಿ ರಚನೆ”ಯಲ್ಲಿ “ಎ” ಗ್ರೇಡ್ ಪಡೆದಿರುತ್ತಾನೆ. ಸುಂದರವಾದ ಗಣಪತಿಯ ಆಕೃತಿ ಹಾಗೂ ಬೇರೆ ಬೇರೆ ಆಕೃತಿಗಳನ್ನು ರಚಿಸುತ್ತಾನೆ. ಸ್ಕೌಟ್ ಶಿಬಿರ, ರಂಗಸಂಸ್ಕೃತಿ ನಾಟಕಶಿಬಿರ, ರಂಗಸಿರಿ ವೇಷ ಭೂಷಣ ಕಾರ್ಯಗಾರ, ಮತ್ತು ತುಳುನಾಡ ಜೋಕ್ಲ ಪರ್ಬ ಇವುಗಳಲ್ಲಿ ಭಾಗವಯಿಸಿ ಅಬಿನಂಧನಾ ಪತ್ರವನ್ನೂ ಪಡೆದಿರುತ್ತಾನೆ. ಬಂಟರ ಸಂಘದ ಕ್ರೀಡಾಕೂಟ, ಬದಿಯಡ್ಕ ವಿಘ್ನೇಶ ಬಾಲಗೋಕುಲ ತರಗತಿಗೆ ಸೇರಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾನೆ. ಅವನು ಈಜು ವಿದ್ಯೆಯನ್ನೂ ಕಲಿತಿರುವ ಈತ, ಪೆನ್ಸಿಲ್ ಡ್ರಾಯಿಂಗ್‌ನಲ್ಲೂ ಪಳಗಿದ್ದಾನೆ. ಬಹುಮುಖ ಪ್ರತಿಭೆಯಾದ ಮನೀಶ್ ರೈಗೆ ಹಲವಾರು ಅವಕಾಶಗಳು ಒದಗಿಬರಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ. ಪ್ರಸ್ತುತ ಕೋವಿಡ್ ಕಾಲಘಟ್ಟದಲ್ಲಿ ಎಲ್ಲೂ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದು ಪ್ರತಿಭೆಗಳಿಗೆ ವೇದಿಕೆ ಲಭಿಸುತ್ತಿಲ್ಲವೆಂಬುದು ಬೇಸರದ ವಿಚಾರವಾಗಿದೆ. ಬದಿಯಡ್ಕ ಸಮೀಪದ ವಳಮಲೆ ಪ್ರಶಾಂತ್ ರೈ ಹಾಗೂ ಭವ್ಯ ರೈ ದಂಪತಿಗಳ ಪುತ್ರ. ಛಲದಿಂದ ಕಲೆಯನ್ನು ಪ್ರೀತಿಸಿ, ಅಭ್ಯಸಿಸಿದಾಗ ಅದು ತಾನಾಗಿಯೇ ಒಲಿದು ಬರುತ್ತದೆ ಎನ್ನುವುದಕ್ಕೆ ಈತನೇ ಸಾಕ್ಷಿ. ಆತನ ಭವಿಷ್ಯ ಉಜ್ವಲವಾಗಲಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss