ಬತ್ತುತ್ತಿರುವ ಯಮುನೆ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಅಭಾವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಾಷ್ಟ್ರ ರಾಜಧಾನಿ ದೆಹಲಿಯ ಜೀವನಾಡಿಯಾದ ಯಮುನಾ ನದಿಯಲ್ಲಿ ನೀರು ಬತ್ತಿಹೋಗುತ್ತಿದ್ದು ದೆಹಲಿಯಲ್ಲಿ ನೀರಿನ ಅಭಾವ ಎದುರಾಗಿದೆ.

ದೆಹಲಿ ಜಲ ಮಂಡಳಿ ಪ್ರಕಾರ ಯಮುನಾ ನದಿಯಲ್ಲಿ ನೀರಿನ ಮಟ್ಟವು ಖಾಲಿಯಾಗುತ್ತಿರುವ ಕಾರಣ ಪ್ರಮುಖ ನೀರು ಪೂರೈಕೆ ಘಟಕಗಳಾದ ಚಂದ್ರವಾಲ್, ವಜೀರಾಬಾದ್ ಮತ್ತು ಓಖ್ಲಾ ನೀರು ಸಂಸ್ಕರಣಾ ಘಟಕಗಳಲ್ಲಿ ನೀರಿನ ಉತ್ಪಾದನೆಯು ಸುಮಾರು 25% ರಷ್ಟು ಕುಸಿದಿದೆ. ವಜೀರಾಬಾದ್ ಕೊಳದ ನೀರಿನ ಮಟ್ಟವು 669.40 ಅಡಿಗಳಿಗೆ ಕುಸಿದಿದ್ದು ಇದು ಈ ವರೆಗಿನ ಅತ್ಯಂತ ಕೆಳಮಟ್ಟವಾಗಿದೆ.

ಈ ಮೂರು ಸ್ಥಾವರಗಳಲ್ಲಿ ಉತ್ಪಾದನೆಯಲ್ಲಿ ವ್ಯತ್ಯಯವಾದರೆ ನಗರದ ಹಲವಾರು ಭಾಗಗಳಿಗೆ ಪೂರೈಕೆ ಸ್ಥಗಿತಗೊಳ್ಳುತ್ತದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್, ದೆಹಲಿ ಕ್ಯಾಂಟ್, ಪಟೇಲ್ ನಗರ, ಕರೋಲ್ ಬಾಗ್, ಸಿವಿಲ್ ಲೈನ್ಸ್, ಪಹರ್‌ಗಂಜ್, ತುಘಲಕಾಬಾದ್, ಮಾಡೆಲ್ ಟೌನ್, ಪಂಜಾಬಿ ಬಾಗ್, ಬುರಾರಿ, ಗ್ರೇಟರ್ ಕೈಲಾಶ್, ಕಮಲಾ ನಗರ, ಶಕ್ತಿ ನಗರ, ಪ್ರಹ್ಲಾದ್‌ಪುರ ಜಹಾಂಗೀರಪುರಿ ಮತ್ತು ಮೂಲಚಂದ್ ವ್ಯಾಪ್ತಿಯ ಪ್ರದೇಶಗಳಲ್ಲಿ ಪೂರೈಕೆಗೆ ತೊಂದರೆಯಾಗುವ ಸಾಧ್ಯತೆಯಿದೆ. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!