Wednesday, July 6, 2022

Latest Posts

ಯಾದಗಿರಿಗೆ ಹೊಸ ಇಎಸ್‌ಐ ಆಸ್ಪತ್ರೆ ಮಂಜೂರು: ಸಂಸದ ಅಮರೇಶ್ವರ ನಾಯಕ

ಹೊಸ ದಿಗಂತ ವರದಿ,ಯಾದಗಿರಿ:

ಜಿಲ್ಲೆಗೆ ಹೊಸ ಇಎಸ್ 10 ಬೆಡ್ ಆಸ್ಪತ್ರೆಯನ್ನು ಕೇಂದ್ರ ಸರಕಾರ ಮಂಜೂರು ಮಡಲಾಗಿದೆ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದ್ದಾರೆ.
ಸಂಸದರು ರಾಯಚೂರು ಇವರು 05-8-2021 ರಂದು ದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ,ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪಿಂದರ್ ಯಾದವ್ ಅವರಿಗೆ ರಾಯಚೂರಿನಲ್ಲಿ ಹೊಸ 50 ಬೆಡ್ ಹಾಸ್ಪಿಟಲ್ ಮತ್ತು ಶಾಖಾ ಕಚೇರಿ ಸ್ಥಾಪನೆಗೆ ಹಾಗೂ ಯಾದಗಿರಿ ಜಿಲ್ಲೆ ಕಲಬುರ್ಗಿ ಜಿಲ್ಲೆಯಿಂದ ಬೇರ್ಪಟ್ಟು 10 ವರ್ಷ ಕಳೆದರೂ ಇದುವರೆಗೆ ಇಎಸ್‌ಐ ಆಸ್ಪತ್ರೆ ಇಲ್ಲದೆ ಕಾರ್ಮಿಕರಿಗೆ ತೊಂದರೆ ಆಗಿದ್ದು ಕೂಡಲೇ ಮಂಜುರಾತಿಗೆ ವಿನಂತಿಸಿದ್ದರು. ಕೇಂದ್ರ ಸಚಿವರು ಸಂಸದರ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿದ್ದು ಅವರು ಮಾನ್ಯ ಸಂಸದರಿಗೆ ಈ ಕುರಿತು ಪತ್ರ ಬರೆದು ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವು ಸ್ಪಂದಿಸುತ್ತಿದ್ದು ಇಎಸ್ ಐಸಿ ಯು ಕಾರ್ಮಿಕರಿಗೆ ಶೇ.100% ವೈದ್ಯಕೀಯ ವೆಚ್ಚವನ್ನು ಭರಿಸುತ್ತಿದೆ ಹಾಗೂ ಕೆಲವು ಸೂಪರ್ ಸ್ಪೆಷಾಲಿಟಿ ಟ್ರೀಟ್ಮೆಂಟ್ಗಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಸಂಪೂರ್ಣ ವೆಚ್ಚವನ್ನು ಭರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹೊಸ ಇಎಸ್‌ಐ ಆಸ್ಪತ್ರೆ ಪ್ರಾರಂಭಕ್ಕೆ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರದಿಂದ ಪ್ರಸ್ತಾವನೆ ಪಡೆದಿದ್ದು ಅದರಂತೆ 03 ವೈದ್ಯರೊಂದಿಗೆ ಯಾದಗಿರಿಯಲ್ಲಿ ಇಎಸ್‌ಐ ಡಿಸ್ಪೆನ್ಸರಿಯ ಪ್ರಾರಂಭಕ್ಕಾಗಿ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿರುವರು.
ಮಾನ್ಯ ಸಂಸದರು ರಾಜಾ ಅಮರೇಶ್ವರ ನಾಯಕ್ ರವರು ಕೇಂದ್ರ ಸಚಿವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಹಾಗೂ ಯಾದಗಿರಿ ಜಿಲ್ಲೆಯ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss