ಯಶ್ ಬೇಗ ಬೇಗ ಸಿನಿಮಾ ಮಾಡಿ…ನಾವು ಕಾಯುತ್ತಿದ್ದೇವೆ: ಕೆಜಿಎಫ್ ಸ್ಟಾರ್ ಗೆ ಬಂತು ಶಾರುಖ್ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೆಜಿಎಫ್, ಕೆಜಿಎಫ್ 2 ಸಿನಿಮಾಗಳ ಯಶಸ್ಸಿನ ಬಳಿಕ ಯಶ್ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಯಶ್‌ಗೆ ಬೇಗ ಸಿನಿಮಾ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಯಶ್ ಕುರಿತು ಮಾತನಾಡಿರುವ ಶಾರುಖ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನವೆಂಬರ್ 2ರಂದು ಶಾರುಖ್ ಖಾನ್ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿದರು. ಅಭಿಮಾನಿಗಳೊಂದಿಗೆ ನಟ ಸಮಯ ಕಳೆದರು. ಈ ವೇಳೆ, ಯಶ್ ಕುರಿತು ಶಾರುಖ್ ಮಾತನಾಡಿರುವ ವಿಡಿಯೋ ಯಶ್ ಅಭಿಮಾನಿಗಳ ಗಮನ ಸೆಳೆದಿದೆ. ಯಶ್ ಬೇಗ ಬೇಗ ಸಿನಿಮಾ ಮಾಡಿ. ಬೆಂಗಳೂರಿನಿಂದ ಬರುವ ಆ ಸಿನಿಮಾಗಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಯಶ್ ಸಿನಿಮಾಗಳ ಮೇಲೆ ಶಾರುಖ್ ಖಾನ್‌ಗೂ ನಿರೀಕ್ಷೆ ಇದೆ ಅನ್ನೋದು ಸ್ಪಷ್ಟವಾಗಿದೆ.

ಶಾರುಖ್ ಅವರು ಯಶ್ ಮೇಲೆ ಇಟ್ಟಿರುವ ನಿರೀಕ್ಷೆ ನೋಡಿ ರಾಕಿ ಬಾಯ್ ಏನು ಹೇಳುತ್ತಾರೆ ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

ನಟ ಯಶ್ ಅವರು ‘ಟಾಕ್ಸಿಕ್’ (Toxic) ಸಿನಿಮಾ ಮತ್ತು ಬಾಲಿವುಡ್‌ನ ‘ರಾಮಾಯಣ’ ಚಿತ್ರದಲ್ಲಿ ನಟನೆಯ ಜೊತೆ ನಿರ್ಮಾಣ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಯಶ್ ರಾವಣನಾಗಿ ರಣಬೀರ್ ಮುಂದೆ ಅಬ್ಬರಿಸಲಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!