ಯಾಸಿನ್‌ ಮಲ್ಲಿಕ್‌ ಅಪರಾಧಿಯೆಂದು ನ್ಯಾಯಾಲಯದಿಂದ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಾಶ್ಮೀರದಲ್ಲಿ ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣನಾಗಿದ್ದ ಯಾಸಿನ್‌ ಮಲ್ಲಿಕ್‌ ತಪ್ಪೊಪ್ಪಿಕೊಂಡ ನಂತರ ದೆಹಲಿಯ ಎನ್‌ಐಎ ನ್ಯಾಯಾಲಯವು ಆತನನ್ನು ದೋಷಿ ಎಂದು ಅಧಿಕೃತವಾಗಿ ಘೋಷಿಸಿದೆ.

ಭಯೋತ್ಪಾದನೆಗೆ ಹಣಸಂದಾಯ ಸೇರಿದಂತೆ ವಿವಿಧ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವುದಾಗಿ ಮಲ್ಲಿಕ್‌ ನ್ಯಾಯಾಲಯದ ಮುಂದೆ ಮೇ. 10 ರಂದು ತಪ್ಪೊಪ್ಪಿಕೊಂಡಿದ್ದ. ವಿಚಾರಣೆ ಮುಂದುವರಿಸಿದ ನ್ಯಾಯಾಲಯವು ಆತನನ್ನು ಅಪರಾಧಿಯೆಂದು ಘೋಷಿಸಿದ್ದು ಆತನ ಆರ್ಥಿಕ ಪರಿಸ್ಥಿತಿಗಳ ಮೌಲ್ಯಮಾಪನ ಮಾಡುವಂತೆ ಎನ್‌ಐ ಅಧಿಕಾರಿಗಳಿಗೆ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣಗಳ ಬಗೆಗಿನ ವಾದವನ್ನು ಮೇ.25ಕ್ಕೆ ಆಲಿಸಲಾಗುವುದು ಎಂದಿದೆ.

ಮೂಲಗಳ ಪ್ರಕಾರ ಮುಂದಿನ ವಿಚಾರಣೆ ದಿನಾಂಕದೊಳಗೆ ತಮ್ಮ ಆಸ್ತಿ, ಹಣಕಾಸಿನ ವಿವರಗಳ ಅಫಿಡವಿಟ್‌ ಸಲ್ಲಿಸುವಂತೆ ಯಾಸುನ್‌ ಮಲಿಕ್‌ ಗೆ ಆದೇಶಿಸಲಾಗಿದೆ.

ಮಲಿಕ್‌ ವಿರುದ್ಧ 2017ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯುಎಪಿಎ ಸೆಕ್ಷನ್ 18 (ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ), ಮತ್ತು 20 (ಭಯೋತ್ಪಾದಕ ಗುಂಪು ಅಥವಾ ಸಂಘಟನೆಯ ಸದಸ್ಯ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 124-ಎ (ದೇಶದ್ರೋಹ) ಗಳ ಅಡಿಯಲ್ಲಿ ಆರೋಪಗಳ ಪಟ್ಟಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!