ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸರ್ಕಾರದ ಪತನ ಗ್ಯಾರಂಟಿ: ಮಲ್ಲಿಕಾರ್ಜು ಶ್ರೀ ಎಚ್ಚರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಧಾರವಾಡ:

ಕರ್ನಾಟಕಕ್ಕೆ ಯಡಿಯೂರಪ್ಪ ಅವರಂತ ಮುಖ್ಯಮಂತ್ರಿ ಸಿಗುವುದು ಬಲುಕಷ್ಟ. ಅವರನ್ನು , ಬಿಜೆಪಿ ಸರ್ಕಾರದ ಪತನ ಗ್ಯಾರಂಟಿ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಎಚ್ಚರಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳುವ ಕೆಲಸ ಹೈಕಮಾಂಡ್ ಮಾಡಬೇಕು. ಕೈಬಿಟ್ಟರೆ ಆರೇ ತಿಂಗಳಲ್ಲಿ ಸರ್ಕಾರ ಬೀಳಲಿದೆ. ಜೊತೆಗೆ ಬಿಜೆಪಿ ವರ್ಚಸ್ಸಿಗೂ ದೊಡ್ಡ ಹೊಡೆತ ಬೀಳಲಿದೆ ಎಂದು ಹೇಳಿದರು.
ಬಿಎಸ್‌ವೈ ಬಿಜೆಪಿಗೆ ಅಡಿಪಾಯ ಹಾಕಿದವರು. ಅವರು ಸಮರ್ಥ ಆಡಳಿತಗಾರ. ಅವರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಬಲ ಬಂದಿದೆ. ಬದಲಾವಣೆ ಬಗ್ಗೆ ಕೇಂದ್ರದರ‍್ಯಾರು ಬಾಯಿ ಬಿಟ್ಟಿಲ್ಲ. ಇದೊಂದು ಗಾಳಿ ಸುದ್ದಿ ಇರಬಹುದು! ಎಂದು ಊಹಿಸಿದರು.
ಲಿಂಗಾಯತ ಶಾಸಕರು, ನಾಯಕರು ಬೆಳೆಯುವುದು, ಮುಖ್ಯಮಂತ್ರಿ ಆಗುವುದು ಕೆಲವರಿಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಒಳಗೊಳಗೆ ಲಿಂಗಾಯತರ ವಿರುದ್ಧ ಸಂಚು ರೂಪಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಕೆಲವರು ಕಿಡಿ ಹಾಕುತ್ತಿದ್ದಾರೆ ಎಂದರು.
ಹೈಕಮಾ0ಡ್ ಬದಲಾವಣೆಯ ಹುಚ್ಚು ಸಾಹಸಕ್ಕೆ ಕೈಹಾಕಬಾರದು. ಇದು ರಾಜ್ಯದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲೂ ಪರಿಣಾಮ ಬೀರಲಿದೆ. ವೀರೇಂದ್ರ ಪಾಟೀಲರಿಗೆ ಆದಂತೆ ಬಿಎಸ್‌ವೈಗೂ ಆಗಬಾರದು ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಬೆಳೆವಣಿಗೆ ಯಡಿಯೂರಪ್ಪ ಅವರಿಗೆ ನೋವು ತರಿಸಿದೆ. ಪಕ್ಷ ಸಂಘಟನೆ, ಸರ್ಕಾರ ರಚನೆಗೆ ಇಷ್ಟಲ್ಲ ಶ್ರಮಿಸಿದರೂ, ಕಾಡಾಟ ತಪ್ಪಿಲ್ಲ ಎಂಬ ಕೊರಗು ಸಹ ಅವರಿಗಿದೆ. ಹೈಕಮಾಂಡ್ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss