ನಿರುಪಯುಕ್ತ ವಾಹನಗಳ ಬಿಡಿ ಭಾಗಗಳಿಂದ ಕಂಗೊಳಿಸಿದ ಯಲಹಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನಿರುಪಯುಕ್ತ ವಾಹನಗಳ ಬಿಡಿಭಾಗಗಳು ವಿವಿಧ ಕಲಾಕೃತಿಗಳು ಯಲಹಂಕದ ಜನರನ್ನ ಕೈಬೀಸಿ ಕರೆಯುತ್ತಿದೆ. ಹಗಲಲ್ಲಿ ಲೋಹದ ಕಲಾಕೃತಿಗಳಾಗಿ ಕಾಣುವ ಕುದುರೆ, ಗ್ಲೊಬ್, ಆಟೋ, ಫಿಯಟ್ ಕಾರುಗಳು ರಾತ್ರಿ ವೇಳೆ ದೀಪಾಲಂಕಾರದಿಂದ ದಾರಿಹೋಕರ ಕಣ್ಮನ ಸೆಳೆಯುತ್ತಿವೆ.
ಯಲಹಂಕ ನಗರದ ದೊಡ್ಡಬಳ್ಳಾಪುರ ರಸ್ತೆಯ ಎನ್ಇಎಸ್ ಸರ್ಕಲ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಡೈರಿ ವೃತ್ತ ಪುಟ್ ಪಾತ್ ನಲ್ಲಿ ವಿವಿಧ ಕಲಾಕೃತಿಗಳು ಜನರ ಆಕರ್ಷಣೆ ಕೇಂದ್ರವಾಗಿವೆ.

₹ 3 ಕೋಟಿ ಮೌಲ್ಯದ ಯೋಜನೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿಶೇಷ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸುಮಾರು ₹ 3‌ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ವಿಶೇಷವಾಗಿ ನಿರುಪಯುಕ್ತ ವಾಹನಗಳ ಬಿಡಿಭಾಗಗಳನ್ನು ಬಳಸಿಕೊಂಡು ಲೋಹದ ಕಲಾಕೃತಿಗಳನ್ನು ರಚಿಸಲಾಗಿದೆ.
ಪುಟ್ ಪಾತ್ ಬದಿಯಲ್ಲಿ ಸುಸಜ್ಜಿತವಾಗಿ ಜೋಡಿಸಲಾಗಿರುವ ಲೋಹದ ಕಲಾಕೃತಿಗಳು ರಾತ್ರಿ ವೇಳೆ ದಿಪಾಲಂಕಾರದಿಂದ ಕಂಗಳಿಸುತ್ತಿವೆ. ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.
ಮಕರ ಸಂಕ್ರಾಂತಿ ಪ್ರಯುಕ್ತ ಈ ವಿಶಿಷ್ಟ ಕಲಾಕೃತಿಗಳನ್ನು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಯಲಹಂಕ ನಗರವನ್ನು ಮತ್ತಷ್ಟು ವರ್ಣರಂಜಿತವಾಗಿಸಲು ಇನ್ನಷ್ಟು ಕ್ರಮ ಕೈಗೊಳ್ಳಲು ಸರಕಾರ ಬದ್ಧ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!