Saturday, June 25, 2022

Latest Posts

ಯಲ್ಲಾಪುರ| ಭಾರೀ ಮಳೆಗೆ ಮನೆ ಕುಸಿತ

ಹೊಸ ದಿಗಂತ ವರದಿ, ಯಲ್ಲಾಪುರ:

ಸುರಿದ ಭಾರಿಮಳೆಗೆ ತಾಲೂಕಿನ ಉಮ್ಮಚ್ಗಿಯಲ್ಲಿ ಮನೆಯೊಂದು ಕುಸಿತಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ .
ಉಮ್ಮಚ್ಗಿ ಕಾಲನಿಯ ನಾಣು ಮಂಜಾ ದೇವಡಿಗ ಎನ್ನುವವರಿಗೆ ಸೇರಿದ ಮನೆಯಾಗಿದ್ದು, ಕುಸಿತಕ್ಕೊಳಗಾದ ಸಂದರ್ಭದಲ್ಲಿ ಮನೆಯವರೆಲ್ಲ ಹೊರಗಿದ್ದರೆಂದು, ಮುಂಜಾಗ್ರತೆಯಾಗಿ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಬೇರೆಡೆ ಸಾಗಿಸಲಾಗಿತ್ತೆಂದು ಹೇಳಲಾಗಿರುತ್ತದೆ.
ಮನೆ ಬಿದ್ದ ಸುದ್ದಿ ತಿಳಿದ ತಕ್ಷಣ ಉಮ್ಮಚ್ಗಿ ಗ್ರಾ.ಪಂ. ಸದಸ್ಯ ಕುಪ್ಪಯ್ಯ ಪೂಜಾರಿ , ತುಡುಗುಣಿ ವಾರ್ಡ ಸದಸ್ಯ ಖೈತಾನ್ ಡಿಸೋಜ, ಗ.ರಾ.ಭಟ್ಟ, ಬಿ.ಜೆ.ಪಿ.ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ದತ್ತು ನಾಯ್ಕ, ಮಂಜುನಾಥ ಮೊಗೇರ ಉಮ್ಮಚ್ಗಿ, ರಾಜೇಶ ಪೂಜಾರಿ ಉಮ್ಮಚ್ಗಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ವಿಲೇಜ್ ಅಕೌಂಟೆಂಟ್ ಸವಿತಾ ಭಜಂತ್ರಿ ಪಂಚನಾಮೆ ನಡೆಸಿ ಮನೆ ನೂರರಷ್ಟು ಹಾನಿಯಾಗಿರುವುದಾಗಿ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss