ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಲ್ಲೇ ಸಂಚಲನ ಮೂಡಿಸಿದ ಸಿನಿಮಾ ಕಾಂತಾರ ತಯಾರಾಗಿದ್ದು ಕೇವಲ 16 ಕೋಟಿಯಲ್ಲಿ. ಆದರೆ ಸಿನಿಮಾ ಕಮಾಯಿ ಮಾಡಿದ್ದು, 400-450 ಕೋಟಿ ರೂ.
ಇಷ್ಟೆಲ್ಲಾ ದುಡ್ಡು ಮಾಡಿದ ಸಿನಿಮಾಕ್ಕೆ ರಿಷಭ್ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ? ಮೂರು ಕೋಟಿ ರೂಪಾಯಿ. ಹೌದು, ರಿಷಬ್ ಡೈರೆಕ್ಷನ್ಗೂ ಸೇರಿ ಹೊಂಬಾಳೆ ಫಿಲ್ಮ್ಸ್ನಿಂದ ಮೂರು ಕೋಟಿ ರೂಪಾಯಿ ಪಡೆದಿದ್ದರಂತೆ. ಕಾಂತಾರ ಬಿಗ್ ಸಕ್ಸಸ್ ನಂತರ ಎಲ್ಲರಿಗೂ ಹೆಚ್ಚುವರಿ ಹಣ ನೀಡಿದ್ದಾರೆ.
ರಿಷಬ್ಗೆ ಸಿನಿಮಾ ಬಜೆಟ್ಗಿಂತಲೂ ಹೆಚ್ಚು ಹಣ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇತ್ತೀಚೆಗಷ್ಟೆ ರಿಷಬ್ ಫ್ಯಾಮಿಲಿ ಜತೆ ದುಬೈ ಟ್ರಿಪ್ ಮಾಡಿದರು. ಈ ಟ್ರಿಪ್ನ ಎಲ್ಲ ಎಕ್ಸ್ಪೆನ್ಸ್ ಕೂಡ ಹೊಂಬಾಳೆ ಫಿಲಂ ಕವರ್ ಮಾಡಿದೆ ಎನ್ನಲಾಗಿದೆ.