ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ಕೊಟ್ಟಿದು ಹೌದು, ಆದ್ರೆ ಮದುವೆ ಸುದ್ದಿ ಸುಳ್ಳು: ನಟಿ ಪ್ರೇಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿಯ ಕಾಪುನಲ್ಲಿರುವ ಕೊರಗಜ್ಜ (Koragajja) ದೇವಸ್ಥಾನಕ್ಕೆ ವಾರದ ಹಿಂದೆಯಷ್ಟೇ ಭೇಟಿ ನೀಡಿದ್ದ ಸಿನಿಮಾ ನಟಿ ಪ್ರೇಮಾ (Prema) ದೈವದ ಮುಂದೆ ಮದುವೆ ವಿಚಾರವನ್ನು ಮಾತನಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಇದೀಗ ಈ ಎಲ್ಲ ವಿಷಯಗಳ ಕುರಿತು ಸ್ವತಃ ಪ್ರೇಮಾ ಅವರೇ ಸ್ಪಷ್ಟನೆ (clarification) ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾ, ‘ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಕೇವಲ ಗಾಸಿಪ್. ಎರಡನೇ ಮದುವೆ ವಿಚಾರ ಎಲ್ಲವೂ ಸುಳ್ಳು. ನಾನು ಹೊಸ ಹೊಸ ಕೆಲಸಗಳ ಬಗ್ಗೆ ಯೋಚನೆ ಮಾಡ್ತಿದ್ದಿನಿ. ಮದುವೆ ಸಮಯ ಬಂದಾಗ ಎಲ್ಲರಿಗೂ ತಿಳಿಸ್ತಿನಿ. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದು ಮದುವೆ ವಿಚಾರವಾಗಿ ಅಲ್ಲ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರುಶನ ಮಾಡಿ ಬಂದೆ. ಮದುವೆ ವಿಚಾರ ಸುಳ್ಳು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆಯೂ ಪ್ರೇಮಾ ಅವರ ಮದುವೆ ವಿಚಾರವಾಗಿ ಈ ರೀತಿ ಸುಳ್ಳು ಸುದ್ದಿ ಹರಿದಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!