Wednesday, August 10, 2022

Latest Posts

ಹೌದು, ನಾವು ಆರ್​​ಎಸ್​ಎಸ್​ನವರು, ನೀವು ಯಾರು?: ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಎಂ ಯಡಿಯೂರಪ್ಪ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಜೆಟ್​ ಸದನ ಸಮಾವೇಶದ ಮೊದಲ ದಿನ ಒಂದು ರಾಷ್ಟ್ರ , ಒಂದು ಚುನಾವಣೆ ಚರ್ಚೆಯ ವಿರುದ್ಧವಾಗಿ ಹಾಗೂ ಶಾಸಕ ಸಂಗಮೇಶ್​ ಅವರನ್ನು ಅಮಾನತು ಮಾಡಿದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್​ ಸದಸ್ಯರ ವರ್ತನೆಯಿಂದ ಅಸಮಾಧಾನಗೊಂಡ ಸಿಎಂ ಬಿಎಸ್​ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್​ ಸದಸ್ಯರು ಸದನದ ಬಾವಿಗಿಳಿದು ಸರ್ಕಾರ ಆರ್​ಆರ್​ಎಸ್ ಕೈಗೊಂಬೆ ಎಂದು ಘೋಷಣೆ ಕೂಗಿದರು. ಈ ವೇಳೆ ಗರಂ ಆಗಿ ಎದ್ದು ನಿಂತ ಸಿಎಂ ಬಿಎಸ್​​ವೈ, ಈ ದೇಶದ ಪ್ರಧಾನಿಯೇ ಆರ್​ಎಸ್​​ಎಸ್​ನವರು ಗೊತ್ತಾ ನಿಮಗೇ… ಅದಕ್ಕೆ ನೀವು ನೆಲಕಚ್ಚಿದ್ದೀರಿ. ಇಲೆಲ್ಲೇ 55 ಜನ ಇದ್ದೀರಿ. ಅದಕ್ಕೆ ಈ ರೀತಿ ಕೂಗುತ್ತಿದ್ದೀರಿ. ಆರ್​ಎಸ್​ಎಸ್​ ಬಗ್ಗೆ ಮಾತನಾಡೋ ನೈತಿಕ ಹಕ್ಕು ನಿಮಗೆ ಏನಿದೆ ಎಂದರು.
ಇತ್ತ ಕಾಂಗ್ರೆಸ್​ ಸದಸ್ಯರು ಘೋಷಣೆ ಮುಂದುವರಿಸಿದ್ದರು. ಇದಕ್ಕೆ ಮತ್ತಷ್ಟು ಗರಂ ಆದ ಸಿಎಂ, ಹೌದು, ನಾವು ಆರ್​​ಎಸ್​ಎಸ್​ನವರು ರೀ, ನೀವು ಯಾರು ಹೇಳಿ? ನಮಗೆ ಆರ್​ಎಸ್​ಎಸ್ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದರು. ಆದರೂ ಸದನದಲ್ಲಿ ಕಾಂಗ್ರೆಸ್​ ಸದಸ್ಯರು ಗದ್ದಲವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss