spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಂದೇ ದಿನ‌ ಮೈ ಮುರಿದು ಮಾಡಿ ಮುಗಿಸದಿರಿ ‘ಯೋಗ’… ಜೀವನವಿಡೀ ಯೋಗ ಮಾಡಿದರೆ ಅಂಗೈಯಲ್ಲಿ ಆರೋಗ್ಯ!

- Advertisement -Nitte

ಇಂದು 7ನೇ ಅಂತಾರಾಷ್ಟ್ರೀಯ ಯೋಗ ದಿನ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ 21 ರಂದು ವಿಶ್ವದ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೋದಿಯವರ ಕರೆಗೆ ವಿಶ್ವದ ನಾಯಕರಿಂದಲೂ ಬೆಂಬಲ ದೊರಕಿತು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾರತ ಹೊಸ ದಿಲ್ಲಿಯ ರಾಜಪಥ್ ನಲ್ಲಿ ಆಚರಿಸಿತು.

ಯೋಗ ಎಂದರೆ ಒಂದು ದಿನ ಮೈ ಮುರಿಯುವಂತೆ ಮಾಡಿ ಮುಗಿಸುವ ಕಾಯಕವಲ್ಲ. ’ಯೋಗ’ ಎನ್ನುವುದು ಜೀವನದ ಅಂತ್ಯದವರೆಗೂ ಜೊತೆ ಇರಬೇಕಾದ ಅದ್ಭುತ ಸಂಸ್ಕಾರ. ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸುವ ಶಕ್ತಿ ಯೋಗಕ್ಕಿದೆ. ಯುಜ್ ಎನ್ನುವ ಪದದಿಂದ ಯೋಗ ಎಂಬ ಪದ ಉತ್ಪತ್ತಿಯಾಗಿದೆ. ಯೋಗ ಎಂದರೆ ಕೂಡಿಸುವುದು ಎಂದರ್ಥ. ಮನಸ್ಸು, ದೇಹ ಹಾಗೂ ಆತ್ಮವನ್ನು ಕೂಡಿಸುವುದೇ ಯೋಗ.

7ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಇಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ, ’ಯೋಗ ಮಾಡುವುದರಿಂದ ನಮ್ಮ ಆತ್ಮ ಶಕ್ತಿ ಹೆಚ್ಚುತ್ತದೆ. ವಿಶ್ವದಲ್ಲಿನ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪರಿಣಾಮ ಬೀರದಂತೆ ತಡೆಯುತ್ತದೆ. ಯೋಗ ಭರವಸೆಯ ಆಶಾಕಿರಣವಾಗಿದ್ದು, ನಿರಂತರ ಯೋಗಾಭ್ಯಾಸದಿಂದ ನಮ್ಮಲ್ಲಿನ ವಿಚಾರ ಶಕ್ತಿ ಹೆಚ್ಚಾಗಲಿದೆ’ ಎಂದಿದ್ದಾರೆ.

ಯೋಗ ಮಾಡುವುದರಿಂದ ಏನೆಲ್ಲ ಲಾಭವಿದೆ?

  • ಯೋಗ ಮಾಡುವುದರಿಂದ ನಿದ್ರಾ ಹೀನತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.
  • ಇಂದಿನ ದಿನಗಳಲ್ಲಿ ವಯಸ್ಸಿನ ಮಿತಿಯಿಲ್ಲದೇ ಬರುವು ದೈಹಿಕ ನೋವು ಉದಾ: ಮಂಡಿ, ಬೆನ್ನು, ಕಾಲು, ಕತ್ತು, ಕೈ, ಸೊಂಟ ಹೀಗೆ ಪ್ರತಿ ನೋವಿಗೂ ಯೋಗದಲ್ಲಿಯೇ ಮದ್ದಿದೆ.
  • ಮಾನಸಿಕ ಶಾಂತಿ ಕೂಡ ಯೋಗದಿಂದ ದೊರೆಯುತ್ತದೆ.
  • ತೂಕ ಇಳಿಕೆಗೆ ಯೋಗ ಬಹಳ ಸಹಕಾರಿ
  • ಯೋಗವು  ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ನಿರಂತರ ಯೋಗಾಭ್ಯಾಸದಿಂದ ತಾಳ್ಮೆ ಹೆಚ್ಚುತ್ತದೆ. ಏಕಾಗೃತೆ ಹೆಚ್ಚುತ್ತದೆ.
  • ಯೋಗದಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಯೋಗದಿಂದ ದೇಹದಲ್ಲಿ ಶ್ವಾಸಕೋಶ, ಹೃದಯ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಉತ್ತೇಜನಗೊಂಡು ಪ್ರತಿರೋಧಕ ವ್ಯವಸ್ಥೆಯು ವೃದ್ಧಿಯಾಗುವುದು.
  • ದೀರ್ಘಕಾಲಿಕ ಉರಿಯೂತ ಸಮಸ್ಯೆಯಿಂದಾಗಿ ಕೆಲವೊಂದು ಮಾರಕ ಕಾಯಿಲೆಗಳಾಗಿರುವಂತಹ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯು ಬರಬಹುದು. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉರಿಯೂತ ಶಮನ ಮಾಡಬಹುದು.
  • ಯೋಗವು  ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುವುದು. ಇದು ಹೃದಯದ ಕಾಯಿಲೆ ಬರುವಂತಹ ಅಪಾಯ ತಪ್ಪಿಸುವುದು.
  • ಯೋಗಾಭ್ಯಾಸ ಮಾಡಿದರೆ ಅದರಿಂದ ನೀವು ದಿನವಿಡಿ ಚೈತನ್ಯದಿಂದ ಇರಬಹುದು. ಇದು ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚು ಮಾಡುವುದು.

ಯೋಗಕ್ಕೆ ಅದರದೇ ಆದ ಭಾಷ್ಯಗಳಿವೆ ಹಾಗೂ ಅದರದೇ ಆದ ನಿಯಮಗಳಿವೆ. ಪ್ರತಿಯೊಬ್ಬ ಯೋಗ ಸಾಧಕನೂ ಕಲಿಸುವ ರೀತಿ, ಮಾರ್ಗದರ್ಶನ ನೀಡುವ ರೀತಿ ಹಾಗೂ ಅನುಭವದಲ್ಲಿ ಕೊಂಚ ವ್ಯತ್ಯಾಸವಿದ್ದರೂ, ಯೋಗದ ಗಮ್ಯ ಮಾತ್ರ ಒಂದೇ. ಯೋಗದ ಗುರಿ ಮಾತ್ರ ಒಂದೇ. ಗುರು ಬೇರೇ ಬೇರೇಯಾದರೂ ಗುರಿ ಒಂದೇ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss