ಗರ್ಭಧಾರಣೆ ವೇಳೆ ಆರೋಗ್ಯ ಹಾಗೂ ಕಾಳಜಿ ಮುಖ್ಯವಾಗುತ್ತೆ. ನಮ್ಮ ಆಹಾರ, ದಿನಚರಿ, ಆಲೋಚನೆಗಳ ಜೊತೆಗೆ ನಮ್ಮ ದೈಹಿಕ ಶ್ರಮವೂ ಅಷ್ಟೇ ಪ್ರಾಮುಖ್ಯತೆ ಹೊಂದಿರುತ್ತದೆ. ವೈದ್ಯರ ಸಲಹೆ ಪಡೆದು ನಿಮಗೆ ಅನುಕೂಲವಾಗುವಂತಹ ಈ ವ್ಯಾಯಾಮಗಳನ್ನು ಮಾಡಿ..
ವೀರಭದ್ರಾಸನ: ಈ ಆಸನಗಳನ್ನು ಮಾಡುವುದರಿಂದ ಕೈ ಕಾಲುಗಳು, ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸಲಿದೆ.
ಶಶಾಂಕಾಸನ: ಈ ಆಸನ ಮಾಡುವುದರಿಂದ ಮೂತ್ರಜನಕಾಂಗದ ವ್ಯವಸ್ಥೆಯನ್ನು ಸುಧಾರಿಸಲಿದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲಿದೆ.
ಉಷ್ಟ್ರಾಸನ: ಇದರಿಂದ ಕಾಲು, ಮೊಣಕಾಲು ಸೇರಿದಂತೆ ಇತರೆ ಸ್ನಾಯುಗಳ ನೋವನ್ನು ಕಡಿಮೆ ಮಾಡುತ್ತದೆ.
ಅರ್ಧಕಟಿಚಕ್ರಾಸನ: ಇದು ದೇಹವನ್ನು ಎಡ ಹಾಗೂ ಬಲ ಭಾಗಗಳಿಗೆ ಸ್ಟ್ರೆಚ್ ಮಾಡಿಸುತ್ತದೆ, ಇದು ಸೋಂಟದ ಸ್ನಾಯುಗಳನ್ನು ಬಲಪಡಿಸಿ ಗರ್ಭಾವಸ್ಥೆಯಲ್ಲಿ ದೈಹಿಕ ಸ್ಥಿರತೆ ನೀಡಲಿದೆ.
ಅರ್ಧ ಸೇತುಬಂಧಾಸನ: ಇದರಿಂದ ಬೆನ್ನು ಮೂಳೆ, ಭುಜಗಳಿಗೆ ಹೆಚ್ಚು ಬಲ ನೀಡಲಿದೆ. ಇದು ಗರ್ಭಧಾರಣೆ ವೇಳೆ ದೇಹವನ್ನುಬಿಗಿ ಹಾಗೂ ಬಲಗೊಳಿಸಲಿದೆ.
ತ್ರಿಕೋನಾಸನ: ಕಿಬ್ಬೊಟ್ಟೆಯ ಅಂಗಗಳನ್ನು ಬಲಗೊಳಿಸಲಿದೆ ಮಾಡುತ್ತದೆ ನಿರಂತರ ಅಭ್ಯಾಸ ಮಾಡುವುದರಿಂದ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಯ ನಿವಾರಿಸುತ್ತದೆ.