spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯೋಗ ಸಾಧಕ ಸ್ವಾಮೀಜಿ ಸ್ವರ್ಣವಲ್ಲಿ ಶ್ರೀಗಳು

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಶಿರಸಿ :

ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸತ್ತಿರುವ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸ್ವತಃ ಯೋಗ ಸಾಧಕ ಗುರುಗಳೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಯೋಗಾಸನ, ಪ್ರಾಣಾಯಾಮ ನಡೆಸಿ ಗಮನ ಸೆಳೆದರು.
ಸೋಮವಾರ ಅವರು ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಯೋಗಾನುಷ್ಠಾನ ನಡೆಸಿ ಆಶೀರ್ವಚನ ನೀಡಿದ ಶ್ರೀಗಳು,
ಜೀವನದ ಸಮತೆ ಪಡೆಯಲು ಯೋಗಾನುಷ್ಠಾನ ಮಹತ್ವದ್ದು .ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ. ಆದರೆ ಯೋಗ ದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಆಗದು. ಯೋಗ ದಿನಾಚರಣೆಯ ಮರು ದಿನ ಯೋಗ ಮಾಡದೇ ಇದ್ದವರೂ ಇದ್ದಾರೆ. ಇದಾಗದೇ ಜೀವನದಲ್ಲಿ ನಿರಂತರ ಯೋಗ ಅನುಷ್ಠಾನ ಮಾಡಬೇಕು. ಆಸನ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು. ಪ್ರತಿದಿನವೂ ಮಾಡಬೇಕು. ವಿಶ್ವ ಯೋಗದ ದಿನಾಚರಣೆಯು ಯೋಗದ ಮೂಲಕ ಎಲ್ಲರೂ ಆರೋಗ್ಯ ಪಡೆಯುವಲ್ಲಿ ನೆರವಾಗಲಿ. ಯೋಗದ ಮೂಲಕ ವಿಶ್ವ ಒಂದಾಗಬಹುದು ಎಂಬುದನ್ನು ಮತ್ತೆ ಒಂದಾಗಬಹುದು ಎಂಬುದನ್ನು ತಿಳಿಸಲಿ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss