ಮೊಸರು ತಿನ್ನೋ ಸ್ಪರ್ಧೆ, ಮೂರೇ ನಿಮಿಷದಲ್ಲಿ ಕೆಜಿ, ಕೆಜಿ ಮೊಸರು ತಿಂದ್ರು ಸ್ಪರ್ಧಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಸಮೋಸ ತಿನ್ನೋ ಸ್ಪರ್ಧೆ, ಇಡ್ಲಿ ತಿನ್ನೋ ಸ್ಪರ್ಧೆ ಬಗ್ಗೆ ಕೇಳಿದ್ದೀರಿ, ಆದ್ರೆ ಬಿಹಾರದಲ್ಲಿ ಮೊಸರು ತಿನ್ನೋ ಸ್ಪರ್ಧೆ ಆಯೋಜಿಸಲಾಗಿತ್ತು. ಡೆಸರ್ಟ್ ರೀತಿ, ಮೊಸರನ್ನ ತಿನ್ನೋಕೆ ಮೊಸರನ್ನು ಬಳಸ್ತೀವಿ, ಆದರೆ ಅದನ್ನೇ ಕೆಜಿಗಟ್ಟಲೆ ತಿನ್ನೋದು ಅಂದ್ರೆ, ಸಾಹಸಾನೇ ಬಿಡಿ!

ಮೊಸರಿನ ಮಹತ್ವ ಸಾರೋದಕ್ಕೆ ಬಿಹಾರದ ಪಾಟ್ನಾದಲ್ಲಿ ಈ ಸ್ಪರ್ಧೆ ನಡೆಸಿದ್ದು, ಬರೋಬ್ಬರಿ ೫೦೦ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ರು. ದಹಿ ಖಾವೋ, ಇನಾಮ್ ಪಾವೋ ಎಂಬ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಮೂರು ನಿಮಿಷದಲ್ಲಿ 3.5 ಕೆ.ಜಿಗಿಂತ ಹೆಚ್ಚು ಮೊಸರು ತಿಂದು ದಾಖಲೆ ಮಾಡಿದ್ದಾರೆ.

ಸುಧಾ ಡೈರಿ ಆಯೋಜಿಸಿದ ಸ್ಪರ್ಧೆಯ ವಿನ್ನರ್‌ಗಳಿಗೆ ಬಹುಮಾನ ನೀಡಲಾಗಿದೆ. ಕಳೆದ ಎರಡು ವರ್ಷದಿಂದ ಕೊರೋನಾ ಕಾರಣಕ್ಕಾಗಿ ಸ್ಪರ್ಧೆ ಏರ್ಪಡಿಸಿರಲಿಲ್ಲ. ಈ ಬಾರಿ ಅದ್ಧೂರಿಯಾಗಿ ಸ್ಪರ್ಧೆ ಏರ್ಪಡಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!