Monday, October 3, 2022

Latest Posts

ಸಲ್ಮಾನ್‌ ರಶ್ದಿ ಬಳಿಕ ನೀನೆ ಟಾರ್ಗೆಟ್: ʻಹ್ಯಾರಿ ಪಾಟರ್‌ʼ ಲೇಖಕಿಗೆ ಜೀವ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬರಹಗಾರ ಸಲ್ಮಾನ್ ರಶ್ದಿ ಮೇಲಿನ ಹಲ್ಲೆ ಘಟನೆ ಮರೆಯುವ ಮುನ್ನವೇ ಮತ್ತೊಬ್ಬ ಲೇಖಕಿಯನ್ನು ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಭಯೋತ್ಪಾದಕ ಸಂಘಟನೆಯ ಸದಸ್ಯರೊಬ್ಬರು ‘ಹ್ಯಾರಿ ಪಾಟರ್’ ಲೇಖಕಿ ಜೆಕೆ ರೌಲಿಂಗ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಎರಡು ದಿನಗಳ ಹಿಂದೆ ಸಲ್ಮಾನ್ ರಶ್ದಿ ಮೇಲೆ ಹಲ್ಲೆ ನಡೆದಿದ್ದು, ರಶ್ದಿ ಗಂಭೀರವಾಗಿ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಲ್ಮಾನ್ ರಶ್ದಿ ಮೇಲಿನ ದಾಳಿಗೆ ಜೆಕೆ ರೌಲಿಂಗ್ ಪ್ರತಿಕ್ರಿಯಿಸಿದ್ದು, ಈ ಘಟನೆಯಿಂದ ಆಘಾತವಾಗಿದೆ. ಕೂಡಲೇ ಅವರು ಚೇತರಿಸಿಕೊಂಡು ಆರೋಗ್ಯವಾಗಿರುತ್ತಾರೆ ಎಂದು ಟ್ವೀಟ್‌ ಮಾಡಿದ್ರು. ಇದಕ್ಕೆ ಮೀರ್ ಆಸಿಫ್ ಅಜೀಜ್ ಎಂಬ ವ್ಯಕ್ತಿ ಪ್ರತ್ಯುತ್ತರ ನೀಡಿ, ʻಚಿಂತಿಸಬೇಡಿ ಮುಂದಿನ ಸರದಿ ನೀನೇʼ ಎಂದು ಪರೋಕ್ಷವಾಗಿ ಕೊಲೆ ಬೆದರಿಕೆ ಹಾಕಿದ್ರು.

ಈ ಹಿಂದೆ ಮೀರ್ ಆಸಿಫ್ ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ʻದಾಳಿಕೋರನ ಹೆಸರು ಹಾದಿ ಮಟರ್‌ ಇರಾನ್‌ನ ಅಯತೊಲ್ಲಾ ಹೊರಡಿಸಿದ ಫತ್ವಾವನ್ನು ಅನುಸರಿಸಿದ ಕ್ರಾಂತಿಕಾರಿʼ ಎಂದು ಆತನ ಪರ ಟ್ವೀಟ್ ಮಾಡಿದ್ದ.

ಈ ಟ್ವೀಟ್‌ಗಳ ಆಧಾರದ ಮೇಲೆ ಆತನೊಬ್ಬ ಭಯೋತ್ಪಾದಕ ಎಂದು ತೋರುತ್ತದೆ. ಜೆಕೆ ರೌಲಿಂಗ್ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ವ್ಯಕ್ತಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯ ಹುಡುಕಾಟದಲ್ಲಿರುವ ಪೊಲೀಸರು ಸೇರಿದಂತೆ ಬೆಂಬಲಿಸಿದ ಎಲ್ಲರಿಗೂ ಜೆಕೆ ರೌಲಿಂಗ್ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!