ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ತಟ್ಟೆ, ಲೋಟ ಎಷ್ಟು ಟೇಸ್ಟಿ ಅಂದರೆ, ಊಟಕ್ಕಿಂತ ಇದೇ ಹೆಚ್ಚು ರುಚಿ ಅನಿಸುತ್ತೆ…!

  • ಮೇಘನಾ ಶೆಟ್ಟಿ, ಶಿವಮೊಗ್ಗ

ರೋಡ್ ಸೈಡ್ ಆಹಾರ ಎಷ್ಟು ಟೇಸ್ಟಿ ಅಲ್ವಾ? ತಿನ್ನದೇ ಇರೋದಕ್ಕೆ ಸಾಧ್ಯವೇ ಇಲ್ಲ. ಆದರೆ ಊಟದ ಜೊತೆ ಪ್ಲಾಸ್ಟಿಕ್ ಅಂಶ ಹೊಟ್ಟೆ ಒಳಗೆ ಹೋಗೋದರ ಬಗ್ಗೆ ಗಮನ ಇರೋದಿಲ್ಲ.
ರೋಡ್ ಸೈಡ್ ಆಹಾರ ಕೊಡುವವರು ಪಾತ್ರೆ ತೊಳೆಯೋಕೆ ಕೈ ನೋವು ಅಂಥ ಪ್ಲಾಸ್ಟಿಕ್ ಲೋಟ, ತಟ್ಟೆಯಲ್ಲಿ ತಿನ್ನೋಕೆ ಕೊಡ್ತಾರೆ. ಇನ್ನೂ ಹಲವು ಕಡೆ ಅವರು ತಟ್ಟೆ ತೊಳೆಯೋ ರೀತಿ ನೋಡಿ ‘ಪ್ಲಾಸ್ಟಿಕ್ ಬೌಲ್ ಅಲ್ ಕೊಡಿ ‘ಅಂತ ನಾವೇ ಕೇಳ್ತೀವಿ.

‘ನಾವೇನ್ ಮಾಡೋಕಾಗತ್ತೆ? ಜೇಬಲ್ಲಿ ತಟ್ಟೆ ಇಡ್ಕೊಂಡು ಓಡಾಡೋಕಾಗುತ್ತಾ.. ಪ್ಲಾಸ್ಟಿಕ್‌ಗೆ ಪರ್ಯಾಯ ವ್ಯವಸ್ಥೆ ಬರೋ ತನಕ ಹೀಗೆ ಇರೋದು’ ಅಂತೀರಾ?
ಈ ರೀತಿ ಆಲೋಚನೆ ಮಾಡ್ತಿದ್ರೆ ಈ ರಿಯಲ್ ಸ್ಟೋರಿ ನಿಮಗೆ ಪರ್ಫೆಕ್ಟ್..

ಬೆಂಗಳೂರಿನ ಗೃಹಿಣಿಯರಾದ ಲಕ್ಷ್ಮಿ ಹಾಗೂ ಶೈಲ ಇದಕ್ಕೆ ಒಂದು ಸೂಪರ್ ಐಡಿಯಾ ಮಾಡಿದ್ದಾರೆ. ಅಕ್ಕಿ, ರಾಗಿ, ಗೋಧಿ, ಮಸಾಲಾ ಪದಾರ್ಥಗಳನ್ನು ಬಳಸಿ ಬೌಲ್ ಹಾಗೂ ಸ್ಪೂನ್‌ನನ್ನು ತಯಾರಿಸಿದ್ದಾರೆ.
ಈ ಕಂಪನಿಯ ಹೆಸರು ‘ಎಡಿಬಲ್ ಟೇಬಲ್‌ವೇರ್’. ಇಲ್ಲಿ ತಯಾರಿಸಿದ ಪಾತ್ರೆಗಳನ್ನು ಹಾಯಾಗಿ ತಿನ್ನಬಹುದು. ಬೆಂಗಳೂರಿನ ಎಷ್ಟೋ ರೆಸ್ಟೋರೆಂಟ್‌ಗಳಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ.

These Women Gave Up Their Corporate Jobs To Pursue Their Dreams And Save The Planet | #Inspiring,#Beautiful,#WhatMumsAreTalkingAbout,Cooking with kids,Lunch Box,Cooking Tips,Party Ideas,Social Issues | Momspressoಇಷ್ಟೊಂದ್ ಫ್ಲೇವರ‍್ಸಾ?
ಈ ಬೌಲ್, ಸ್ಪೂನ್ ಹಾಗೂ ಲೋಟಗಳಿಗೂ ಫ್ಲೇವರ್‌ಗಳಿವೆ. ಅದನ್ನು ನಾವು ಕೇಳಿ ನಮಗಿಷ್ಟದ ಫ್ಲೇವರ್ ಬಳಸಬಹುದು.60 ಕ್ಕೂ ಹೆಚ್ಚು ಫ್ಲೇವರ್‌ನ ಬೌಲ್, ಲೋಟಗಳಿವೆ.

What's the Difference Between Fruits and Vegetables? | Better Homes & Gardensಊಟಕ್ಕಿಂತ ಲೋಟ ಚಂದ:
ಈ ಲೋಟದಲ್ಲಿ ಕುಡಿಯುವವರು, ಬೌಲ್‌ನಲ್ಲಿ ತಿನ್ನುವವರು ಅದರೊಳಗೆ ಇರುವ ಆಹಾರಕ್ಕಿಂತ ಲೋಟವೇ ಟೇಸ್ಟಿ ಎನ್ನುತ್ತಾರೆ. ಅದನ್ನೇ ಕಚ್ಚಿ ತಿನ್ನುತ್ತಾ ಯಮ್ಮಿ ಎನ್ನುತ್ತಾರೆ.

Women Quit IBM Jobs to Make Edible Cutlery That Can Save The Planetಸಂಪೂರ್ಣ ಆರ್ಗಾನಿಕ್:
ಈ ಬೌಲ್, ಲೋಟ ಕಂಪ್ಲೀಟ್ ಆರ್ಗಾನಿಕ್ ಆಗಿದೆ. ಇದರಲ್ಲಿ ಯಾವುದೇ ಕೆಮಿಕಲ್ಸ್ ಸೇರಿಲ್ಲ. ಆರೋಗ್ಯದ ಬಗ್ಗೆ ಅತಿಯಾಗಿ ಕಾಳಜಿ ಮಾಡುವವರು ಮನೆಯಲ್ಲೂ ಇದನ್ನು ತಂದು ಇಟ್ಟುಕೊಳ್ಳಬಹುದು.

Women Quit IBM Jobs to Make Edible Cutlery That Can Save The Planetಎಲ್ಲಾದ್ರೂ ಬಿಸಾಕಿ:
ಇದನ್ನು ತಿಂದರೆ ಒಕೆ, ತಿನ್ನದೇ ಹೋಟೆಲ್‌ನ ಡಸ್ಟ್‌ಬಿನ್ ಅಥವಾ ರಸ್ತೆಬದಿಯ ಚರಂಡಿ ಎಲ್ಲಾದರೂ ಬಿಸಾಡುತ್ತೇವೆ ಎಂದರೂ ಪರವಾಗಿಲ್ಲ. ಏಕೆ ಗೊತ್ತಾ? ನೀವು ಇದನ್ನು ಬಿಸಾಡಿದ 40 ನಿಮಿಷಕ್ಕೆ ಮಣ್ಣಿನೊಳಗೆ ಸೇರಿಬಿಡುತ್ತದೆ. ಸ್ವಲ್ಪವೂ ಪ್ಲಾಸ್ಟಿಕ್ ಇಲ್ಲದ ಕಾರಣ ಇದು ಭೂಮಿಗೂ ಒಳ್ಳೆಯದೇ.

Edible spoons, forks, bowls: Eat your cutlery to save the planet - The Weekಐಡಿಯಾ ಬಂದದ್ದು ಹೇಗೆ?
‘ದಿನಕ್ಕೆ ಬೆಂಗಳೂರಿನಲ್ಲಿ ಎಷ್ಟು ಪ್ಲಾಸ್ಟಿಕ್ ಭೂಮಿಗೆ ಸೇರುತ್ತಿದೆ ಗೊತ್ತಾ? ಭೂಮಿ ಗಲೀಜು ಮಾಡಿದ್ದು ಸಾಲದೇ ಸಮುದ್ರವನ್ನೂ ಹಾಳು ಮಾಡ್ತಾರೆ. ಇದನ್ನೆಲ್ಲ ಸಹಿಸೋಕೆ ಆಗೋದಿಲ್ಲ. ಪರ‍್ಯಾಯ ಮಾರ್ಗಕ್ಕಾಗಿ ಮನಸ್ಸಿಟ್ಟು ಹುಡುಕಾಡಿದ್ದಕ್ಕೆ ಮಾರ್ಗ ಸಿಕ್ಕಿತು’ ಎನ್ನುತ್ತಾರೆ ಈ ಸೂಪರ್ ವುಮೆನ್ಸ್.

How Does Trash Get in the Ocean? Practical Ways to Tackle the Problemಚಪಾತಿಯಿಂದ ಹೊಳೆದದ್ದು:
ಮೊದಲು ಮನೆಯಲ್ಲಿಯೇ ಚಪಾತಿ ಮಾಡುವಾಗ ಈ ಐಡಿಯಾ ಹೊಳೆದಿದೆ. ನಂತರ ಗೋಧಿ, ಜೋಳ ಹೀಗೆ ಕಾಂಬಿನೇಶನ್‌ಗಳ ಜೊತೆ ಕೆಲಸ ಮಾಡಿ, ಮನೆಬಳಕೆಗೆ ಬೌಲ್ಸ್ ತಯಾರಿಸಿದ್ದಾರೆ. ಅದು ಸಕ್ಸಸ್ ಆದ ನಂತರ ಇನ್ನುಳಿದ ಕಾಂಬಿಬೇಶನ್,ಫ್ಲೇವರ‍್ಸ್ ತಯಾರಿಸಿದ್ದಾರೆ.

Shaila Gurudutt and Lakshmi Bhimacha of Bangalore have made utensils that can be eaten, they are successful in protecting the environment. | Bangalore's Shaila Gurudutt and Laxmi Bhimachara quit IBM jobs, startedಯಾವ್ಯಾವ ಇಂಗ್ರೀಡಿಯಂಟ್ಸ್ ಇದೆ?
ಇದರಲ್ಲಿ ಜೋಳ, ಮಿಲ್ಲೆಟ್, ವಿಧವಿಧದ ಕಾಳು ಬೇಳೆ, ಮಸಾಲೆ ಪದಾರ್ಥಗಳು.

How to Make Multigrain Atta at Home and There Benefitsಹೇಗೆ ತಯಾರಾಗುತ್ತದೆ?
ಮೊದಲು ಎಲ್ಲ ರೀತಿಯ ಕಾಳು ಬೇಳೆಗಳನ್ನು ಹಿಟ್ಟು ಮಾಡಿಕೊಳ್ಳುತ್ತಾರೆ. ಅಂಗಡಿಯ ಹಿಟ್ಟುಗಳನ್ನು ಬಳಸದೆ, ಮನೆಯಲ್ಲೇ ಹಿಟ್ಟಿನ ಗಿರಣಿ ಇಟ್ಟುಕೊಂಡಿದ್ದಾರೆ.
ನೀರು ಬಳಸಿ ಹಿಟ್ಟು ಮಾಡಿಕೊಂಡು, ಡಿಸೈನ್ ಮಾಡುತ್ತಾರೆ. ಕೆಲವು ಮಶೀನ್ ವರ್ಕ್ ಇನ್ನೂ ಹಲವು ಹ್ಯಾಂಡ್‌ಮೇಡ್. ನಂತರ ಅವನ್‌ನಲ್ಲಿ ಬೇಯಿಸುತ್ತಾರೆ.

Bakey's edible cutlery is Narayana Peesapaty's solution to save the environment from plastic pollution - PRO Indiaಹಾಟಾ? ಕೋಲ್ಡಾ?:
ಈ ಬೌಲ್ಸ್ ನೋಡಿದ ತಕ್ಷಣ ಬಿಸಿ ಸೂಪ್ ಹಾಕಿದ್ರೆ ಕರಗಿಹೋಗುತ್ತದೆ. ಅಥವಾ ಐಸ್ ಕ್ರೀಂ ತಿನ್ನೋಕೆ ಆಗೋದಿಲ್ಲ ಎಂದುಕೊಂಡಿದ್ದರೆ ಅದೂ ಕೂಡ ತಪ್ಪು. ಇದನ್ನು ಹಾಟ್ ಅಥವಾ ಕೋಲ್ಡ್ ವಸ್ತುಗಳನ್ನು ತಿನ್ನೋದಕ್ಕೂ ಬಳಸಬಹುದು. 40  ಡಿಗ್ರಿ ಸೆಲ್ಶಿಯಸ್ ಹೀಟ್‌ನ್ನು ಇದು ತಡೆದುಕೊಳ್ಳುತ್ತದೆ.

7 Ways to Have Your Spoon and Eat It Too! - Goodnetಜನರ ರೆಸ್ಪಾನ್ಸ್ ಹೇಗಿದೆ?
ಇದನ್ನು ಬಳಸಿದ ಜನ, ಅದರಲ್ಲೂ ಯೂತ್ಸ್ ಗೆ ಇದು ತುಂಬಾನೇ ಇಷ್ಟ ಆಗಿದೆ. ಈಗಾಗಲೇ ಭೂಮಿಯನ್ನು ಹಾಳುಮಾಡಿದ್ದೇವೆ. ಪ್ಲಾಸ್ಟಿಕ್ ಬಳಸುತ್ತಿಲ್ಲ ಅನ್ನೋ ತೃಪ್ತಿಯಲ್ಲಿ ಊಟ ಮಾಡಬಹುದು ಅಂತಾರೆ.

HISTORY TV18 | OMG! Nature | Edible Cutleryಹೇಗಿತ್ತು ಈ ಸ್ಟೋರಿ? ಪ್ಲಾಸ್ಟಿಕ್‌ಗೆ ಬೇರೆ ಪರ್ಯಾಯ ಇಲ್ಲ ಎಂದುಕೊಂಡವರಿಗೆ ಈ ಹೊಸ ಐಡಿಯಾ ತುಂಬಾನೇ ಖುಷಿ ಕೊಟ್ಟಿರಬಹುದು. ಭೂಮಿಯನ್ನು ನಾವು ಹಾಳು ಮಾಡಿರುವುದು ಅಷ್ಟಿಷ್ಟಲ್ಲ. ಮತ್ತೆ ಭೂಮಿ ಮೊದಲಿನಂತೆ ಆಗೋದಂತೂ ಅಸಾಧ್ಯ. ಆದರೆ ನಮ್ಮ ಸಣ್ಣ ಬದಲಾವಣೆಯಿಂದ ಎಲ್ಲೋ ಭೂಮಿಗೆ ಅಳಿಲು ಸೇವೆ ಸಿಗೋದಾದ್ರೆ ಯಾಕೆ ಮಾಡಬಾರದು? ಅಲ್ವಾ??

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss