ಮನೆಯಲ್ಲಿಯೇ ಧ್ಯಾನ ಮಾಡಬಹುದು, ಏಕೆ ಈ ನಾಟಕ?: ಪ್ರಧಾನಿ ಮೋದಿ ವಿರುದ್ಧ ಖರ್ಗೆ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್‌ನಲ್ಲಿ ಪ್ರಧಾನಿ ಮೋದಿ ಅವರು 45 ಗಂಟೆಗಳ ಧ್ಯಾನ ಆರಂಭಿಸಿದ್ದಾರೆ.

ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಗೆ ಅದನ್ನು ಮನೆಯಲ್ಲಿಯೂ ಮಾಡಬಹುದಿತ್ತು ಎಂದು ಟೀಕಿಸಿದ್ದಾರೆ.

ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖರ್ಗೆ, ಮೋದಿ ಅವರು 45 ಗಂಟೆಗಳ ಕಾಲ ಮನೆಯಲ್ಲಿ ಧ್ಯಾನ ಮಾಡಬಹುದಿತ್ತು, ಅಲ್ಲಿಗೆ ಹೋಗುವ ಅಗತ್ಯ ಏನಿತ್ತು, ಹತ್ತು ಸಾವಿರ ಪೊಲೀಸ್ ಸಿಬ್ಬಂದಿ ಅವರನ್ನು ರಕ್ಷಿಸುತ್ತಿದ್ದಾರೆ, ಏಕೆ ಈ ನಾಟಕ? ನೀವು ಮನೆಯಲ್ಲಿಯೇ ಪೂಜೆ ಮತ್ತು ಧ್ಯಾನ ಮಾಡಬಹುದು. ಭದ್ರತೆಗಾಗಿ ನೂರಾರು ಜನರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ. ಇದೇನು ಪ್ರದರ್ಶನ? ಇದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಗುರುವಾರ ಸಂಜೆ ಧ್ಯಾನ ಮಂಟಪದಲ್ಲಿ ತಮ್ಮ 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ್ದು ಇದು ಜೂನ್ 1 ರ ಶನಿವಾರದ ಸಂಜೆಯವರೆಗೆ ಮುಂದುವರಿಯುತ್ತದೆ. ಧ್ಯಾನ ಮಂಟಪವು 1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಅದೇ ಸ್ಥಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!