ಯಾವುದೇ ಫಂಕ್ಷನ್‌ಗೆ ಹೋದರೂ ನಾನು ಇನ್ನೂ ಚೆನ್ನಾಗಿ ರೆಡಿಯಾಗ್ಬೇಕಿತ್ತು, ಇನ್ನೂ ಒಳ್ಳೆಯ ಬಟ್ಟೆ ಖರೀದಿ ಮಾಡ್ಬೇಕು, ಫ್ಯಾಷನ್ ಸೆನ್ಸ್ ಚೆನ್ನಾಗಿರಬೇಕು ಎಂದು ಅನಿಸುತ್ತದಾ? ಹಾಗಿದ್ರೆ ನಿಮ್ಮ ಫ್ಯಾಷನ್ ಸೆನ್ಸ್ ಇಂಪ್ರೂವ್ ಮಾಡೋಣ? ಹೇಗೆ ನೋಡಿ..
- ಈಗ ಇರುವ ನಿಮ್ಮ ಕಬೋರ್ಡ್‌ನ್ನು ಒಮ್ಮೆ ನೋಡಿ, ಅಂಗಡಿಗೆ ಹೋಗಿ ಬಟ್ಟೆ ಖರೀದಿ ಮಾಡೋದೆ ಆಗಿದ್ದರೆ ನಿಮ್ಮ ಬಟ್ಟೆಗಳನ್ನು ತೆಗೆದುಕೊಳ್ಳುತ್ತಿದ್ರಾ?
- ಪ್ರತಿದಿನ ಹಾಕುವ ಬಟ್ಟೆಗಳನ್ನು ಹ್ಯಾಂಗರ್ ಬಳಸಿ ನೇತುಹಾಕಿ, ಯಾವ ಬಟ್ಟೆ ಎಂದು ಆರಿಸೋಕೆ ಸುಲಭ.
- ರಿಟರ್ನ್ ಇಲ್ಲದ ಬಟ್ಟೆಗಳನ್ನು ಖರೀದಿ ಮಾಡಬೇಡಿ, ಹಾಕಿ ನೋಡಿ ಬೇಡ ಎಂದರೆ ಕೊಡುವಂತೆ ಇರಬೇಕು.
- ಬಟ್ಟೆ ಲೂಸ್ ಇದೆ, ಟೈಟ್ ಇದೆ ಎನ್ನೋದಾದ್ರೆ ಅಂಥವುಗಳನ್ನು ಎತ್ತಿಟ್ಟುಬಿಡಿ
- ನಿಮ್ಮ ಬಾಡಿ ಟೈಪ್ ಹೇಗಿದೆ? ಅದಕ್ಕೆ ತಕ್ಕಂಥ ಬಟ್ಟೆ ಹಾಕಿ, ತೆಳ್ಳಗಿದ್ದೇನೆ ಎಂದು ಲೂಸಾದ ಬಟ್ಟೆ, ದಪ್ಪ ಇದ್ದೇನೆ ಎಂದು ಟೈಟ್ ಆದ ಬಟ್ಟೆ ಹಾಕಬೇಕಿಲ್ಲ.
- ನಿಮ್ಮ ಕಬೋರ್ಡ್‌ನಲ್ಲಿ ಏನೆಲ್ಲಾ ಇದೆ ಅದೆಲ್ಲವೂ ಕಾಣುವಂತಿರಲಿ, ಕಾಣದೇ ಹೋದರೆ ಬಳಸುವುದೇ ಇಲ್ಲ.
- ಫ್ಯಾಷನ್ ಪ್ರೋಗ್ರಾಮ್‌ಗಳು, ವಿಡಿಯೋಗಳಿಂದ ಬಟ್ಟೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ನಿಮ್ಮ ಇಷ್ಟದ ಸೆಲೆಬ್ರಿಟಿಗಳನ್ನು ಫಾಲೋ ಮಾಡಿ ಅವರ ಸ್ಟೈಲ್‌ನ್ನು ಗಮನಿಸಿ, ಫ್ಯಾಷನ್ ಮ್ಯಾಗಝೀನ್‌ಗಳನ್ನು ಓದಿ
- ಹಳೆಯ ಜೀನ್ಸ್‌ಗಳು ಔಟ್ ಆಫ್ ಫ್ಯಾಷನ್ ಎಂದು ಎಸೆಯಬೇಡಿ, ವರ್ಷಗಳ ನಂತರ ಮತ್ತೆ ಅದೇ ಫ್ಯಾಷನ್ ಬರಬಹುದು.
- ಟೈಟ್ ಜೀನ್ಸ್‌ಗಿಂತ ವೈಡ್ ಬಾಟಮ್ ಜೀನ್ಸ್ ಪ್ರಿಫರ್ ಮಾಡಿ
- ನಿಮ್ಮ ಸೈಝ್‌ಗಿಂತ ಒಂದು ಸೈಝ್ ಕಡಿಮೆ ಬಟ್ಟೆ ಹಾಕಿದ್ರೆ ಸಣ್ಣ ಕಾಣುತ್ತೇನೆ ಎನ್ನೋದು ಭ್ರಮೆ ನಿಮ್ಮ ಬಾಡಿ ಸೈಝ್‌ಗೆ ಪರ್ಫೆಕ್ಟ್ ಆದ ಬಟ್ಟೆ ಹಾಕಿ
- ಸಣ್ಣಗಿರುವವರಿಗೆ ಓವರ್‌ಸೈಝ್ ಕ್ಲೋಥ್ ಚೆನ್ನಾಗಿ ಕಾಣುತ್ತದೆ, ಕಾಲು ತುಂಬಾ ಸಣ್ಣ ಇದ್ದರೆ ಲೆಗ್ಗಿಂಗ್, ಬಾಡಿ ಹಗ್ಗಿಂಗ್ ಬಟ್ಟೆ ಹಾಕಬೇಡಿ.