ಹೊಸವರ್ಷದ ಶುಭಾಶಯ ಕಳುಹಿಸಲು ಹೋಗಿ ಯಡವಟ್ಟು: ನೂರಾರು ರೋಗಿಗಳ ಕಣ್ಣೀರು ಹಾಕಿಸಿದ ಲಂಡನ್‌ ಆಸ್ಪತ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಲವೊಮ್ಮೆ ಉತ್ಸಾಹದ ಭರದಲ್ಲಿ ಮಾಡುವ ಕೆಲಸಗಳು ಮತ್ತಿನ್ನೇನೋ ಆಗಿ ಅನಾರ್ಥ ಆಗುವುದುಂಟು. ಲಂಡನ್‌ ನ ಆಸ್ಪತ್ರೆಯೊಂದು ಅಂತಹದ್ದೇ ಒಂದು ದೊಡ್ಡ ಯಡವಟ್ಟು ಮಾಡಿಕೊಂಡಿದೆ. ತನ್ನಲ್ಲಿ ತಪಾಸಣೆಗೆ ಬಂದ ರೋಗಿಗಳಿಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭಾಶಯ ಕೋರಲು ಹೋಗಿ ʼನಿಮಗೆ ಸ್ವಾಸಕೋಶದ  ಕ್ಯಾನ್ಸರ್‌ ಪತ್ತೆಯಾಗಿದೆ. ಧನ್ಯವಾದಗಳು ಎಂದುಬಿಟ್ಟಿದೆ!. ಈ ಸಂದೇಶ ನೋಡಿದ ರೋಗಿಗಳು ಹೌಹಾರಿ ಕಕ್ಕಾಬಿಕ್ಕಿಯಾಗಿದ್ದಾರೆ. ಹಲವರು ಆಘಾತದಿಂದ ಕಣ್ಣೀರಿಟ್ಟಿದ್ದಾರೆ.
ದಕ್ಷಿಣ ಯಾರ್ಕ್‌ಷೈರ್‌ನ ಡಾನ್‌ಕಾಸ್ಟರ್ ಬಳಿಯ ಆಸ್ಕರ್ನ್ ಮೆಡಿಕಲ್ ಪ್ರಾಕ್ಟೀಸ್‌ ಆಸ್ಪತ್ರೆ ಇಂತಹದ್ದೊಂದು ಎಡವಟ್ಟು ಮಾಡಿದೆ. ಈ ರೋಗಿಗಳಿಗೆ ಕೇವಲ 20 ನಿಮಿಷಗಳಲ್ಲಿ ಮತ್ತೊಂದು ಶಾಕ್‌ ಎದುರಾಗಿದೆ. ಮತ್ತೊಂದು ಸಂದೇಶ ಕಳುಹಿಸಿದ ಆಸ್ಪತ್ರೆ “ದಯವಿಟ್ಟು ಈ ಹಿಂದಿನ ಸಂದೇಶಕ್ಕಾಗಿ ಕ್ಷಮಿಸಿ. ಅದನ್ನು ತಪ್ಪಾಗಿ ಕಳುಹಿಸಲಾಗಿದೆ” ನಿಮಗೆ ಕ್ಯಾನ್ಸರ್‌ ಇಲ್ಲ. ಹೊಸ ವರ್ಷದ ಶುಭಾಶಗಳು ಎಂದು ಹೇಳಿದೆ.
ಆಸ್ಪತ್ರೆಯ ಸಂದೇಶವನ್ನು ಎಷ್ಟು ಜನರು ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಒಬ್ಬ ಸ್ವೀಕೃತದಾರರಾದ 57 ವರ್ಷದ ಪ್ರಾಪರ್ಟಿ ಡೆವಲಪರ್ ಕ್ರಿಸ್ ರೀಡ್, ಶ್ವಾಸಕೋಶದ ಕ್ಯಾನ್ಸರ್ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದರು. ಅವರಿಗೆ ಈ ಸಂದೇಶ ಬಂದಾಗ ಅವರ ಸಂಗಾತಿ ಕಣ್ಣೀರಿಟ್ಟಿದ್ದರು. ರೋಗಿಗಳು ಈ ಸಂದೇಶ ಕಳುಹಿಸಿದ ಆಸಾಮಿಗಾಗಿ ಹುಡುಕಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!