Wednesday, June 29, 2022

Latest Posts

ಮೊಬೈಲ್‌ ಆಪ್‌ʼನಲ್ಲೇ ಫುಡ್‌, ಸೀಟಿಂಗ್‌, ಪೇಮೆಂಟ್‌ ಮಾಡ್ಬೋದು! ಹೊಸ ಫುಡ್‌ ಆಪ್‌ ಅಭಿವೃದ್ಧಿಪಡಿಸಿದ ಯುವಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಬೈಲ್‌ ನ ಈ ಆಪ್‌ ಮೂಲಕವೇ ನಿಮ್ಮ ಫೇವರೇಟ್‌ ರೆಸ್ಟೋರೆಂಟ್‌ ನಲ್ಲಿ ಸೀಟ್‌ ಬುಕ್‌ ಮಾಡಿ, ಊಟ ಆರ್ಡರ್‌ ಮಾಡಿ ಆರಾಮಾಗಿ ಹೋಗಿ ನಿಮ್ಮ ತಿನಿಸುಗಳನ್ನು ಎಂಜಾಯ್‌ ಮಾಡಬಹುದು.
ಇಬ್ಬರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೇರಿ ಒಂದೊಳ್ಳೆ ಆಪ್‌ ಲಾಂಚ್‌ ಮಾಡಿದ್ದಾರೆ. ಉಮರ್‌ ಅಹ್ಮದ್‌ ಹಾಗೂ ನಜ್ಜು ಸಾಕಿಬ್‌ ಈ ಆಪ್‌ ಸಿದ್ಧಗೊಳಿಸಿದ್ದಾರೆ. ಇದರ ಹೆಸರು ʼಡಿಟೂʼ. ಮತ್ತೊಂದು ವಿಶೇಷವೆಂದರೆ ಈ ಆಪ್‌ ಅನ್ನು ನಜ್ಮುಲ್‌ ಸಕ್ಯುಬ್‌ ಕೇವಲ ನಾಲ್ಕು ತಿಂಗಳಲ್ಲಿ ವಿನ್ಯಾಸಗೊಳಿಸಿದ್ದಾರೆ.
ಡಿಟೂ ಆಪ್‌ ಮೂಲಕ ಮುಂಗಡವಾಗಿ ಆಹಾರ ಆರ್ಡರ್‌ ಮಾಡಬಹುದಾಗಿದ್ದು, ನೆಚ್ಚಿನ ರೆಸ್ಟೋರೆಂಟ್‌ ನ ಟೇಬಲ್‌ ಗಳನ್ನ ಕೂಡ ಬುಕ್‌ ಮಾಡಬಹುದು. ಇದನ್ನು ಕಾಶ್ಮೀರ ಕಣಿವೆಯ ಕೆಲವು ರೆಸ್ಟೋರೆಂಟ್‌ ಗಳು ಇದರಲ್ಲಿ ನೋಂದಣಿಯಾಗಿವೆ.
ಈ ಆಪ್‌ ಮೂಲಕ ಆಹಾರವನ್ನು ಆಡರ್‌ ಮಾಡಿ ಪಾರ್ಸಲ್‌ ತೆಗೆದು ಹೋಗಬಹುದು ಅಥವಾ ಡೈನ್‌ ಇನ್‌ ಕೂಡ ಆಯ್ಕೆ ಮಾಡಬಹುದು. ಈಗಾಗಲೇ ಒಂದು ತಿಂಗಳಲ್ಲಿ 230 ಆರ್ಡರ್‌ ಗಳು ಬಂದಿವೆ. ಮುಂದಿನ ದಿನಗಳಲ್ಲಿ ಆಪ್‌ ಅನ್ನು ಮತ್ತಷ್ಟು ವಿನ್ಯಾಸಗೊಳಿಸಲಿದ್ದು, ವೃತ್ತಿಪರರಿಗೆ ಹೆಚ್ಚು ಸಹಕಾರಿಯಾಗಲಿದೆ ಎನ್ನುತ್ತಾರೆ ನಜ್ಮುಲ್‌.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss