VIRAL VIDEO| ಟರ್ಕಿ ಭೂಕಂಪ: ಅವಶೇಷಗಳಡಿ ಸಿಲುಕಿದ ಬಾಲಕಿ ಹೊರ ಬಂದ ಬಗೆ ನೋಡಿ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೂಕಂಪಕ್ಕೆ ಸಾವಿರಾರು ಕಟ್ಟಡಗಳು ನೆಲಸಮವಾಗಿದ್ದು, ಇಲ್ಲಿಯವರೆಗೆ 3,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಷ್ಟು ದೊಡ್ಡ ಭೂಕಂಪ ಸಂಭವಿಸಿ 12 ಗಂಟೆ ಕಳೆಯುವಷ್ಟರಲ್ಲಿ ಮತ್ತೆ ಕೆಲವೆಡೆ ಭೂಕಂಪ ಸಂಭವಿಸಿದೆ.

ಕುಸಿದ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಭದ್ರತಾ ಪಡೆಗಳು ಮತ್ತು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಟರ್ಕಿಯಲ್ಲಿ ಸಾವಿರಾರು ಜನರು ಪ್ರಸ್ತುತ ಪರಿಹಾರ ಕಾರ್ಯಗಳಿಗಾಗಿ ಸ್ವಯಂಸೇವಕರಾಗಿದ್ದಾರೆ. ಬದುಕುಳಿದವರ ರಕ್ಷಣೆ ಮತ್ತು ಮೃತ ದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ಇತ್ತೀಚಿನ ಪರಿಹಾರ ಕಾರ್ಯಗಳ ಭಾಗವಾಗಿ ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಲಾಗಿದೆ. ಅಪಘಾತವಾದ ಕೆಲವೇ ಗಂಟೆಗಳಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾಳೆ. ಕೂಡಲೇ ರಕ್ಷಣಾ ತಂಡಗಳು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದವು. ಈ ಬಾಲಕಿ ಯಾವುದೇ ಅಪಾಯವಿಲ್ಲದೆ ಹೊರಬರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!