ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯನ್ನು ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡು ಮೂಲದ ಮೊಹಮ್ಮದ್ ಅಲಿ ಸಮೀರಾ ಎಂದು ಗುರುತಿಸಲಾಗಿದೆ.
ಕಾಸರಗೋಡಿನ ಸಮೀರ ಎಂಬ ಯುವತಿ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಳು. ಈಕೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನದ ಮೇಲೆ ತಪಾಸಣೆ ನಡೆಸಿದ್ದು, ಆಗ ಯುವತಿಯ ಒಳಚಡ್ಡಿ ಮತ್ತು ಸ್ಯಾನಿಟರಿ ಪ್ಯಾಡ್, ಸಾಕ್ಸ್ ನಲ್ಲಿ ಬಂಗಾರ ಸಿಕ್ಕಿದೆ. ಈಕೆಯ ಬಳಿ 2.41 ಕೆ ಜಿ ಚಿನ್ನ ಸಿಕ್ಕಿದ್ದು ಅದರ ಮೌಲ್ಯ 1.10 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಆಕೆಯ ಬಳಿಯಲ್ಲಿ ವಿದೇಶಿ ಸಿಗರೇಟುಗಳು ಪತ್ತೆಯಾಗಿದ್ದು ಆಕೆಯನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.