ಹೊಸದಿಗಂತ ವರದಿ, ವಿಜಯಪುರ:
ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಅಸುನೀಗಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಶಿವಾನಿ ಹೋಟೆಲ್ ಹತ್ತಿರ ನಡೆದಿದೆ.
ಮೃತಪಟ್ಟವನನ್ನು ಪಟ್ಟಣದ ನಿವಾಸಿ ನಿರಂಜನ ಅಲ್ದಿಮಠ ಎಂದು ಗುರುತಿಸಲಾಗಿದೆ.
ನಿರಂಜನ ಅಲ್ದಿಮಠ ಈತ ಕಳೆದ ರಾತ್ರಿ ಸ್ನೇಹಿತನೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಪಾರ್ಟಿ ಬಳಿಕ ನಿರಂಜನ ಮೃತಪಟ್ಟಿದ್ದಾನೆ. ಇದಾದ ಬಳಿಕ ಸ್ನೇಹಿತ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.