ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ಸಿಲುಕಿದ್ದ ಇಬ್ಬರು ಬಾಲಕಿಯರನ್ನು ಮಾನವ ಸರಪಳಿ ನಿರ್ಮಿಸಿ ಯುವಕರ ತಂಡ ರಕ್ಷಿಸಿದೆ.
ಈ ಘಟನೆ ಚೀನಾದ ಕ್ಸಿಂಟಿಯನ್ನಲ್ಲಿ ನಡೆದಿದ್ದು, ಬೆಂಕಿ ಕಾಣಿಸಿಕೊಂಡಿರುವ ಕಟ್ಟಡದಲ್ಲಿ ಸಿಲುಕಿರುವ ಬಾಲಕಿಯರನ್ನು ಆರು ಜನ ಯುವಕರು ರಕ್ಷಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕರು ಒಬ್ಬರ ಮೇಲೆ ಒಬ್ಬರಂತೆ ಚೈನ್ ತರ ನಿಂತು ಬೆಂಕಿ ಕಾಣಿಸಿಕೊಂಡ ಬಹುಮಹಡಿ ಕಟ್ಟಡವನ್ನು ಹತ್ತಿದ್ದಾರೆ. ಅಲ್ಲಿ ಸಿಲುಕಿದ್ದ ಬಾಲಕಿಯರನ್ನು ಹೊರಗೆ ಎಳೆದು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
25 ಸೆಕೆಂಡ್ ವಿಡಿಯೋ ಇದಾಗಿದ್ದು, ಯುವಕರ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.