ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯುವ ಮೋರ್ಚಾವು ಭವಿಷ್ಯದ ನಾಯಕರನ್ನು ತಯಾರು ಮಾಡುವ ಕಾರ್ಖಾನೆ: ಡಾ. ಮಲ್ಲಿಕಾರ್ಜುನ ಬಾಳೆಕಾಯಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಭಾರತೀಯ ಜನತಾ ಪಾರ್ಟಿ ಅದರಲ್ಲೂ ಮುಖ್ಯವಾಗಿ ಯುವ ಮೋರ್ಚಾವು ಭವಿಷ್ಯದ ನಾಯಕರನ್ನು ತಯಾರು ಮಾಡುವ ಕಾರ್ಖಾನೆಯಾಗಿದೆ ಎಂದು ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳೆಕಾಯಿ ಹೇಳಿದರು.
ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬುಧವಾರ ನಡೆದ ಜಿಲ್ಲಾ ಯುವ ಮೋರ್ಚಾದ ವಿಶೇಷ ಸಭೆಯಲ್ಲಿ ಮಾತನಾಡಿ, ಬಿಜೆಪಿ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕಾರ್ಯಕರ್ತನನ್ನಾಗಿ ಮಾಡಿ ಅವನಲ್ಲಿ ಶ್ರದ್ಧೆ, ನಿಷ್ಠೆ ಮತ್ತು ಬದ್ಧತೆಯನ್ನು ತುಂಬಿ ಅವನನ್ನು ನಾಯಕನನ್ನಾಗಿ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದಲ್ಲಿ ಜನಿಸಿದವರು ನಾಯಕರಾಗುತ್ತಾರೆ. ಹಾಗೆಯೇ ಜೆಡಿಎಸ್ ನಲ್ಲಿ ಒಂದು ಮನೆಯಲ್ಲಿ ಜನಿಸಿದವರು ನಾಯಕರಾಗುತ್ತಾರೆ. ಬಿಜೆಪಿಯಲ್ಲಿ ನಾಯಕರು ಯಾವುದೇ ಕುಟುಂಬದ ಹೆಸರಿನಲ್ಲಿ ಹುಟ್ಟುವುದಿಲ್ಲ. ಪಕ್ಷದಲ್ಲೇ ನಾಯಕನಾಗಿ ಹೊರಹೊಮ್ಮುತ್ತಾನೆ. ಇದಕ್ಕೆ ಅಡಿಪಾಯವನ್ನು ಹಾಕುವುದೇ ಯುವ ಮೋರ್ಚಾ ಎಂದರು.
ಸಾಮಾನ್ಯ ಯುವಕನನ್ನು ಕರೆತಂದು ಆತನ ನೈಜ ಸಾಮಥ್ರ್ಯದ ಅರಿವನ್ನು ಅವನಿಗೆ ಮಾಡಿಸಿ ದೇಶದ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟುವಂತೆ ಮಾಡಿ ಅದಕ್ಕಾಗಿ ಆತನಲ್ಲಿ ತ್ಯಾಗದ ಮನಸ್ಥಿತಿಯನ್ನು ತಂದು ಉತ್ತಮ ನಾಯಕನನ್ನಾಗಿ ರೂಪಿಸುವ ಕಾರ್ಯಪದ್ಧತಿ ನಮ್ಮದು ಎಂದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ದೇಶದ ಎಲ್ಲಾ ಆಗು ಹೋಗುಗಳಲ್ಲೂ ಕೂಡ ಯುವಮೋರ್ಚಾ ಪಾತ್ರ ಪ್ರಾಮುಖ್ಯವಾಗಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಸಿ.ಟಿ. ರವಿ ಅವರಂತಹ ನಾಯಕರುಗಳಿಗೂ ಕೂಡ ಈ ಯುವ ಮೋರ್ಚಾವೇ ಮೊದಲ ಮೆಟ್ಟಿಲಾಗಿತ್ತು. ಯುವಕರಿಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವ ಪಕ್ಷ ಬಿಜೆಪಿ ಮಾತ್ರ ಎಂದರು.
ಯುವ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್ ಮೂಡಿಗೆರೆ ಮಾತನಾಡಿ ಕೊರೊನಾದಿಂದಾಗಿ ಭಾರತವು 25 ವರ್ಷಗಳಷ್ಟು ಹಿಂದೆ ಹೋಗಿದೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದು, ಜಾಗತಿಕವಾಗಿ ಮುಂದುವರಿದ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಕೊರೊನಾದ ಸಾವಿನ ಪ್ರಮಾಣ ಭಾರತಕ್ಕಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್ ಹರಿವಿನಂಗಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ದೇವರಾಜ್ ಶೆಟ್ಟಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಹರ್ಷಿತ್ ವೆಂಕಟೇಶ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕೋಟ್ಯಾನ್, ಗಗನ್ ಕಡೂರು ಮತ್ತು ವಿವಿಧ ಮಂಡಲಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss