ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ, ಈಗಾಗಲೇ ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ.
ಆದರೆ ಇಲ್ಲೊಂದು ಪ್ರಣಾಳಿಕೆ ಸದ್ದಿಲ್ಲದೇ ಫೇಮಸ್ ಆಗ್ತಾ ಇದೆ, ಸಾಕಷ್ಟು ಯುವಕರು ಈ ಪ್ರಣಾಳಿಕೆಯನ್ನು ಮೆಚ್ಚಿದ್ದಾರೆ. ಅರಭಾವಿಯ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣಾ ಕುಳ್ಳೂರ ತಮ್ಮ ಪ್ರಣಾಳಿಕೆಯಲ್ಲಿ ಹೆಣ್ಣು ಸಿಗದ ಯುವಕರಿಗೆ ಮದುವೆ ಮಾಡಿಸಿಕೊಡುತ್ತೇವೆ, ಮದುವೆ ಭಾಗ್ಯ ಯೋಜನೆ ಜಾರಿಗೆ ತರುತ್ತೀವಿ ಎಂದು ಹೇಳಿಕೊಂಡಿದ್ದಾರೆ.
ಇವರ ಜತೆ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ಕೂಡ ಇದೇ ಘೋಷಣೆಯನ್ನು ಮಾಡಿದ್ದಾರೆ. ವಿಶೇಷವೇನೆಂದರೆ ಇವರಿಬ್ಬರೂ ಸಹೋದರರು. ಸದ್ಯಕ್ಕೆ ಪ್ರಣಾಳಿಕೆ ಎಲ್ಲೆಡೆ ವೈರಲ್ ಆಗಿದೆ.