VIDEO | ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಬಂಧಿಯ ಮದುವೆ ಸಮಾರಂಭದಲ್ಲಿ ವೇದಿಕೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ. ರೆಸಾರ್ಟ್‌  ಒಂದರಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿತ್ತು.

ಯುವತಿಯೊಬ್ಬರು ಖುಷಿ ಖುಷಿಯಿಂದ ವೇದಿಕೆ ಮೇಲೆ ನೃತ್ಯ ಮಾಡುತ್ತಿದ್ದಳು, ಏಕಾಏಕಿ ಕುಸಿದುಬಿದ್ದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಘರ್ಕೆಕಲೇಶ್​ ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಸೀರೆಯುಟ್ಟ ಯುವತಿ ಬಾಲಿವುಡ್​ನ ಲೆಹ್ರಾ ಕೆ ಬಲ್ಖಾ ಕೆ ಹಾಡಿಗೆ ನೃತ್ಯ ಮಾಡುತ್ತಿದ್ದಳು, ಇದ್ದಕ್ಕಿಂದ್ದಂತೆ ಕುಸಿದುಬೀಳುವುದನ್ನು ಕಾಣಬಹುದು. ವಿವರಗಳ ಪ್ರಕಾರ,ಮೃತಳನ್ನು ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಅವರು ಇಂದೋರ್ ನಿವಾಸಿಯಾಗಿದ್ದರು. ತಮ್ಮ ಸೋದರಸಂಬಂಧಿಯ ಸಹೋದರಿಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ವಿದಿಶಾಗೆ ಬಂದಿದ್ದರು. ಹಲ್ದಿ ಕಾರ್ಯಕ್ರಮದ ಸಮಯದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸಮಾರಂಭದಲ್ಲಿ ಹಾಜರಿದ್ದ ವೈದ್ಯರು ಕೂಡಲೇ ಸಿಪಿಆರ್ ನೀಡಿದ್ದಾರೆ, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಪರಿಣಿತಾ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ಆಕೆ ಎಂಬಿಎ ಪದವೀಧರೆಯಾಗಿದ್ದು, ಇಂದೋರ್​ನಲ್ಲಿ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಆಕೆಯ ಕಿರಿಯ ಸಹೋದರಿ ತನ್ನ 12ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಳು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!