Sunday, August 14, 2022

Latest Posts

ಒಂದು ಗಂಟೆ ಪ್ರಿಯಕರನೊಂದಿಗೆ ಫೋನ್ ನಲ್ಲಿ ಮಾತನಾಡಿದ ನಂತರ ಯುವತಿ ನೇಣಿಗೆ ಶರಣು!! ಅಲ್ಲಿ ನಡೆದಿದ್ದು ಏನು?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಿಳಾ ದಿನದಂದೇ ತೆಲಂಗಾಣದ ಮೈಲಾರ್ದೇವ್​ಪಲ್ಲಿ ಮೂಲದ ಯುವತಿಯೊಬ್ಬಳ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಮಹತ್ವದ ವಿಷಯಗಳು ಬಹಿರಂಗವಾಗಿದೆ. ಪಾಲಕರು ಮತ್ತು ಬಾಯ್ ಫ್ರೆಂಡ್’ನ ಕಿರುಕುಳದಿಂದ ಬೇಸತ್ತು ನೇಣಿಗೆ ಕೊರಳು ಕೊಟ್ಟಿರುವುದು ತಿಳಿದುಬಂದಿದೆ.

ಲಿಜಾ (20) ಮೃತ ದುರ್ದೈವಿ. ಈಕೆಯ ತಂದೆ ಪರಮೇಶ್ವರ್​ ಒಡಿಶಾ ಮೂಲದವರು. ಪರಮೇಶ್ವರ್ ಕುಟುಂಬ 20 ವರ್ಷದ ಹಿಂದೆ ತೆಲಂಗಾಣದ ಲಕ್ಷ್ಮಿ ಗುಡ ಎಂಬಲ್ಲಿ ನೆಲೆಸಿದ್ದರು. ಇದೇ ಏರಿಯಾದಲ್ಲಿ ಅಕ್ರಮ್​ ಅಲಿಯಾಸ್​ ಅಪ್ಸರ್​ (20) ಎಂಬಾತನೂ ನೆಲೆಸಿದ್ದ

ಲಿಜಾ ಮತ್ತು ಅಪ್ಸರ್​  ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹವಿತ್ತು. ಕೆಲವು ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿತ್ತು.  ಇವರ ಪ್ರೀತಿ ವಿಷಯ ಲೀಜಾ ಮನೆಯವರಿಗೆ ತಿಳಿದು ಅಪ್ಸರ್’ಗೆ ಎಚ್ಚರಿಕೆ ನೀಡಿದ್ದರು.

ಆದರೂ ಅವರ ಪ್ರೀತಿ ಮುಂದುವರೆದಿತ್ತು. ಇದರಿಂದ ಸಿಟ್ಟಿಗೆದ್ದ ಲೀಜಾ ಪಾಲಕರು ಆಕೆಯ ತಲೆ ಕೂದಲನ್ನು ಕತ್ತರಿಸಿದ್ದರು. ಆಕೆ ಹೊರಗಡೆ ಹೋಗುವುದನ್ನು ತಡೆಯಲು ಈ ರೀತಿ ಮಾಡಿದ್ದರು. ಇದರಿಂದಾಗಿ ಅವಳು ಬಹಳ ಖಿನ್ನತೆಗೆ ಒಳಗಾಗಿದ್ದಳು. . ಇತ್ತ ಅಪ್ಸರ್​ ಸಹ ಕರೆ ಮಾಡಿ ಕಿರುಕುಳ ನೀಡಲು ಆರಂಭಿಸಿದ.

ಮಾ.8ರಂದು ಲಿಜಾ 1 ಗಂಟೆಗಳ ಕಾಲ ಪ್ರಿಯಕರನೊಂದಿಗೆ ಮಾತನಾಡಿ, ನಂತರ ತನ್ನ ರೂಮ್ ನಲ್ಲಿಯೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ. ಆಕೆ ಮೃತ ಪಟ್ಟ ನಂತರವೂ ಅಪ್ಸರ್ 135 ಸಲ ಫೋನ್ ಮಾಡಿದ್ದಾನೆ.

ಈ ಸಂಬಂಧ ಲೀಜಾ ಕುಟುಂಬ ಅಪ್ಸರ್​ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮೈಲಾರ್ದೇವ್​ಪಲ್ಲಿ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss