ಇತ್ತೀಚೆಗೆ ಪೀರಿಯಡ್ಸ್ ತುಂಬಾ ಬೇಗ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇನ್ನೂ ಈಗಷ್ಟೆ 8-9 ವರ್ಷ ತುಂಬಿದ ಮಕ್ಕಳು ಋತುಮತಿಯಾಗುತ್ತಿರುವುದು ಒಂದೆಡೆ ಆತಂಕ ಸೃಷ್ಟಿಸುತ್ತದೆ. ಈ ಪುಟ್ಟ ಮಕ್ಕಳಿಗೆ ನಾವೇನು ಹೇಳಿಕೊಡಬೇಕು ಅನ್ನುವ ಚಿಂತೆ ಪ್ರತಿಯೊಬ್ಬ ತಾಯಿಗೂ ಇರಲಿದೆ. ಹಾಗಿದ್ದರೆ ಇದನ್ನು ತಪ್ಪದೇ ಓದಿ…
ಪೀರಿಯಡ್ ಕಿಟ್: ಮಕ್ಕಳಿಗೆ ಬೇಕಾಗುವ ಇನ್ನರ್ ವೇರ್, ಪ್ಯಾಡ್, ಬಟ್ಟೆಗಳನ್ನು ಒಂದು ಕಿಟ್ ರೀತಿಯಲ್ಲಿ ರೆಡಿ ಮಾಡಿ ಕೊಡಿ.
ಪ್ಯಾಡ್: ಅವರಿಗೆ ಪ್ಯಾಡ್ ಧರಿಸೋದು, ಎಸಿಯುವ ಕುರಿತು ಮಕ್ಕಳಿಗೆ ಮಾಹಿತಿ ಕೊಡಿ. ಇದನ್ನು ತಾವೇ ಧರಿಸುವ ಬಗ್ಗೆ ಅರಿವು ಮೂಡಿಸಿ.
ರೆಸ್ಟ್: ಚಿಕ್ಕ ಮಕ್ಕಳು ಬೇಗ ಪೀರಿಯಡ್ಸ್ ಆದಾಗ ಹೊಟ್ಟೆ ನೋವು ಬರುವುದು ಸಹಜ. ಈ ವೇಳೆ ಅವರಿಗೆ ರೆಸ್ಟ್ ಮಾಡಲು ಬಿಡಿ.
ವ್ಯಾಯಾಮ: ಮಕ್ಕಳಿಗೆ ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡೋದು ಅಭ್ಯಾಸ ಮಾಡಿಸಿ. ಇದು ಅವರ ಪೀರಿಯಡ್ಸ್ ಸಮಸ್ಯೆ ಕಾಡದಿರಬಹುದು.
ಪೀರಿಯಡ್ ಡೇಟ್ಸ್: ಮಕ್ಕಳಿಗೆ ನೆಕ್ಸ್ಟ್ ಪೀರಿಯಡ್ ಡೇಟ್ ಯಾವುದು ಅಂತ ತಿಳಿಸಿಕೊಡಿ.