ದಿನಭವಿಷ್ಯ | ನಿಮ್ಮ ತಾಳ್ಮೆ ಕೆಡಿಸೋ ಎಲ್ಲಾ ಪ್ರಯತ್ನ ಮಾಡುತ್ತಾರೆ, ಎಚ್ಚರ!

ಮೇಷ
ಈ ದಿನ ಪದೇಪದೇ ನಿಮ್ಮ ತಾಳ್ಮೆ ಕೆಡುವ ಪ್ರಸಂಗ ಸಂಭವಿಸಬಹುದು. ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

ವೃಷಭ
ದಿನವಿಡೀ ಏನಾದರೊಂದು ಕೆಲಸ, ಒತ್ತಡ.  ವಿಶ್ರಾಂತಿಗೆ ಅವಕಾಶ ಸಿಗುವುದಿಲ್ಲ.  ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಆದೀತು.

ಮಿಥುನ
ನಿಮಗಿಂದು ಮಹತ್ವದ ದಿನ. ನಿಮ್ಮ ನಿರ್ವಹಣೆಯು ಇತರರ ಗಮನ ಸೆಳೆಯಲಿದೆ. ಸಂಗಾತಿ, ಸ್ನೇಹಿತರ ಜತೆ ಉತ್ತಮ ಬಾಂಧವ್ಯ. ಧನಲಾಭ ಸಾಧ್ಯತೆ.

ಕಟಕ
ಕೆಲವು ವಿಷಯಗಳ ಕುರಿತು ಅತಿಯಾಗಿ ಚಿಂತಿಸುವಿರಿ.ಇದು ಕೌಟುಂಬಿಕ ಬದುಕಿನ ಮೇಲೂ ಪರಿಣಾಮ ಬೀರಬಹುದು. ಸಂಯಮದಿಂದಿರಿ.

ಸಿಂಹ
ಸಹೋದ್ಯೋಗಿಗಳ ಜತೆ ಉತ್ತಮ ಸಹಕಾರ. ಆರ್ಥಿಕ ಲಾಭ. ಆರೋಗ್ಯಕ್ಕೆ ಸಂಬಂಧಿಸಿದ  ಆತಂಕ ದೂರ. ಕೌಟುಂಬಿಕ ಪರಿಸರದಲ್ಲಿ ವಾಗ್ವಾದ ನಡೆದೀತು.

ಕನ್ಯಾ
ಮನೆ ಮತ್ತು ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ. ಆಪ್ತರ ಜತೆ ನಿಮ್ಮ ಭಾವನೆ ಹಂಚಿಕೊಳ್ಳಲು ಹಿಂಜರಿಯದಿರಿ. ಅದರಿಂದ ಸಾಂತ್ವನ.

ತುಲಾ
ಪ್ರಮುಖ ಕಾರ್ಯವನ್ನು ಇಂದು ಮುಗಿಸಲಾಗದೆ ಇಕ್ಕಟ್ಟು ಅನುಭವಿಸುವಿರಿ. ಸಂವಹನದ ಕೊರತೆ . ದಿನದಂತ್ಯಕ್ಕೆ ಅನಿರೀಕ್ಷಿತ ಖರ್ಚು. ಕೌಟುಂಬಿಕ ಆಶಾಂತಿ.

ವೃಶ್ಚಿಕ
ಕೌಟುಂಬಿಕವಾಗಿ ಅಸಹನೆ, ಅಸಮಾಧಾನ ಉಂಟಾಗಬಹುದು. ಸಹನೆಯಿಂದ ವರ್ತಿಸುವುದು ಸೂಕ್ತ. ಕೆಲವರ ವರ್ತನೆ ಸಹಿಸಿಕೊಳ್ಳಿರಿ.

ಧನು
ನಿಮ್ಮ ಕೆಲಸವನ್ನು ಸಹನೆಯಿಂದ ನಿರ್ವಹಿಸಿ. ನಿಮ್ಮ ತಾಳ್ಮೆ ಕೆಣಕುವ ಪ್ರಯತ್ನ ಕೆಲವರಿಂದ ಆಗಬಹುದು. ಅದನ್ನು  ಕಡೆಗಣಿಸಿ.

ಮಕರ
ನಿಮ್ಮ ದೈನಂದಿನ ಕಾರ್ಯಗಳಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು. ಅತಿಯಾದ ಒತ್ತಡದಿಂದಾಗಿ ಕೆಲಸದಲ್ಲಿ ತಪ್ಪುಗಳು ಘಟಿಸಬಹುದು.

ಕುಂಭ
ಕೆಲಸದ ಒತ್ತಡ ಅಧಿಕ. ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸುವುದು.  ಕೌಟುಂಬಿಕ ಪರಿಸರವು ನಿಮಗೆ ಆಹ್ಲಾದವನ್ನು ತರುತ್ತದೆ.

ಮೀನ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಮೂಡದು. ಅವರಿಂದ ಕಿರಿಕಿರಿ ಎದುರಿಸುವಿರಿ.  ಅಜೀರ್ಣದ ಸಮಸ್ಯೆಯಿಂದ ಹೊಟ್ಟೆ ಕೆಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!