Saturday, July 2, 2022

Latest Posts

ನಿಮ್ಮ ಮೊಬೈಲ್ ನಲ್ಲಿ ಕಾಲ್ಸ್ ಬಂದಾಗ ರಿಂಗ್ ಆಗೋದೇ ಕೇಳೋದಿಲ್ವಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಎಷ್ಟೋ ಸಲ ನಮ್ಮ ಮೊಬೈಲ್ ಕೈನಲ್ಲೇ ಇದ್ದರೂ ಕರೆ ಬಂದಿರೋದು ಗೊತ್ತೇ ಆಗೋದಿಲ್ಲ. ಇದಕ್ಕೆ ನಿಮ್ಮ ಫೋನ್ ನಲ್ಲಿನ ಸಾಫ್ಟ್ ವೇರ್ ತೊಂದರೆಯಾಗಿರುತ್ತದೆ. ಇದನ್ನು ಸರಿಪಡಿಸೋದಕ್ಕೆ ಈ ಟಿಪ್ಸ್ ಫಾಲೋ ಮಾಡಿ

ವಾಲ್ಯೂಮ್: ಕೆಲವೊಮ್ಮೆ ನಮ್ಮ ಕೈ ತಪ್ಪಿ ವಾಲ್ಯೂಮ್ ಕಡಿಮೆಯಾಗಿ ಹೋಗಿರುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ನಲ್ಲಿ ಸೌಂಡ್ ಜಾಸ್ತಿ ಮಾಡಿಕೊಳ್ಳಿ.

ರೀ ಸ್ಟಾರ್ಟ್: ಮೊಬೈಲ್ ನ ಸಾಫ್ಟ್ ವೇರ್ ಸಮಸ್ಯೆಯಿಂದ ಕೆಲವು ಸಲ ನಿಮ್ಮ ಮೊಬೈಲ್ ನಲ್ಲಿ ಕಾಲ್ಸ್ ಟೋನ್ ಕೇಳೋದಿಲ್ಲ. ಆಗ ನಿಮ್ಮ ಮೊಬೈಲ್ ಅನ್ನು ಒಂದು ಸಲ ಸ್ವಿಚ್ ಆಫ್ ಮಾಡಿ ಆನ್ ಮಾಡಿ.

ಏರೋಪ್ಲೇನ್ ಮೋಡ್/ಡಿಎನ್ ಡಿ: ಇದು ಕೂಡ ಯಾವುದೋ ಅಚಾನಕ್ ಘಟನೆಯಿಂದ ಏರೋಪ್ಲೇನ್ ಮೋಡ್/ಡಿಎನ್ ಡಿ ಮೋಡ್ ಆನ್ ಆಗಿರುತ್ತದೆ. ಇವುಗಳನ್ನು ಆಫ್ ಮಾಡಿದರೆ ನಿಮಗೆ ಕಾಲ್ಸ್ ಬರೋದು ಕೇಳುತ್ತದೆ.

ಕಾಲ್ ವರ್ಗಾವಣೆ:  ನಿಮ್ಮ ಮೊಬೈಲ್ ನಲ್ಲಿ ಕಾಲ್ ವರ್ಗಾವಣೆ ಆಯ್ಕೆಯನ್ನು ಅನಗತ್ಯ ಮಾಡಬೇಡಿ. ಇದರಿಂದ ನಿಮಗೆ ಕಾಲ್ ಬರೋದೆ ತಿಳಿಯೋದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss