Friday, July 1, 2022

Latest Posts

ಪದವಿ ನಂತರ ಸಮಾಜ ರಕ್ಷಣೆ ಜವಾಬ್ದಾರಿ ನಿಮ್ಮದು: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಹೊಸದಿಗಂತ ವರದಿ, ಮಂಡ್ಯ:

ಪದವಿ ಗಳಿಸುವವರೆಗೆ ಸಮಾಜ ನಿಮ್ಮನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಪದವೀಧರರಾದ ನಂತರ ಸಮಾಜವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮದು ಎಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಪಿಇಎಸ್ ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ಘಟಿಕೋತ್ಸವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಸಂಸ್ಥೆಗೆ ಕಾಲಿಟ್ಟಾಗ ನಿಮ್ಮಲ್ಲಿನ ಜೀವನಶೈಲಿ, ಶಿಸ್ತು, ಸಂಸ್ಕೃತಿಯನ್ನು ಒಪ್ಪಿಕೊಂಡು ಗೌರವಿಸಿದೆ. ಅದೇ ರೀತಿಯಲ್ಲಿ ಈಗ ಸಮಾಜವನ್ನು ನೀವು ಗೌರವಿಸಬೇಕಿದೆ. ಹಲವು ವರ್ಷಗಳಿಂದ ಓದಿ ಪದವಿ ಪಡೆದಿರುವ ನೀವು ದುಡಿಯುವುದಕ್ಕೆ, ಸಂಪಾದಿಸುವುದಕ್ಕೆ ಸಿದ್ಧರಾಗುತ್ತಿದ್ದೀರಿ. ಓದುವುದಕ್ಕೆ ತೋರಿದ ಶ್ರದ್ಧೆ, ಬದ್ಧತೆ, ಕಾಳಜಿಯನ್ನು ದುಡಿಯುವ ವೇಳೆ ಸಮಾಜಕ್ಕೆ ಕೊಡುಗೆ ಮತ್ತು ರಕ್ಷಣೆ ಮಾಡುವ ಕಡೆ ತೋರಿಸಿದಾಗ ನಿಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಹೇಳಿದರು.
ಕಲಿಕೆಯನ್ನು ಗುರಿಯಾಗಿಸಿಕೊಂಡು ಶಿಕ್ಷಣ ಸಂಸ್ಥೆಯನ್ನು ಸೇರಿದಿರಿ. ಇಲ್ಲಿಂದ ಕಲಿತು ಹೊರಹೋಗುವ ಸಮಯದಲ್ಲಿ ಸೇವೆಯನ್ನು ಗುರಿಯಾಗಿಸಿಕೊಳ್ಳಬೇಕು. ಕೇವಲ ಓದು-ಸಂಪಾದನೆಯನ್ನಷ್ಟೇ ಗುರಿಯಾಗಿಸಿಕೊಂಡರೆ ಪ್ರಯೋಜನವಿಲ್ಲ. ಸಮಾಜ ರಕ್ಷಣೆಗೆ ಅದನ್ನು ಸದ್ವಿನಿಯೋಗ ಮಾಡಿಕೊಂಡಾಗ ಮಾತ್ರ ನಿಮ್ಮನ್ನು ಸಮಾಜ ಗೌರವಿಸುತ್ತದೆ
ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss