ಹೊಸ ದಿಗಂತ ವರದಿ, ಯಾದಗಿರಿ:
ತಾಲೂಕಿನ ಕೊಂಕಲ್ ಗ್ರಾಮದ ಯುವಕ ವೆಂಕಟೇಶ ತಂದೆ ಶಿವಪ್ಪ ದೊಣ್ಣೆಗೌಡರ (40) ಮೊಸಳೆ ದಾಳಿಗೆ ಬಲಿಯಾದ ಘಟನೆ ಬುಧುವಾರ ಸಾಯಂಕಾಲ ನಡೆದಿದೆ.
ಘಟನೆಯ ವಿವರ: ಯುವಕ ವೆಂಕಟೇಶ ಹಾಗೂ ಮಾಹದೇವಪ್ಪ ದಿದ್ದಿಗಿ ಇಬ್ಬರು ಕೂಡಿಕೊಂಡು ಕೃಷ್ಣಾ ನದಿಗೆ ಮೀನು ಹಿಡಿಯಲು ನದಿಗೆ ಹೋಗಿದ್ದರು. ವಯಸ್ಸಿನಲ್ಲಿ ಹಿರಿಯರಾದ ಮಹಾದೇವಪ್ಪನನ್ನು ನದಿಗೆ ನೀರಿನಲ್ಲಿ ಇಳಿಸದೆ ವೆಂಕಟೇಶ ತಾನೆ ನೀರಿನಲ್ಲಿ ಇಳಿದು ಮೀನು ಹಿಡಿಯಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಮೊಸಳೆ ವೆಂಕಟೇಶನ ಮೇಲೆ ದಾಳಿ ಮಾಡಿ ನೀರಿನಲ್ಲಿ ಎಳೆದುಕೊಂಡು ಹೋಗಿದೆ.
ಘಟನೆಯ ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಹೋಗಿ ಶವ ಹುಡುಕುತಿದ್ದಾರೆ.ಆದರೆ ಇನ್ನೂವರೆಗೂ ಶವ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ತಹಸೀಲ್ದಾರರ ಸುರೇಶ ಅಂಕಲಗಿ, ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ ಬೇಟಿ ಕೊಟ್ಟು ಪರಿಶೀಲಿಸಿದರು.
ಕೃಷ್ಣಾ ನದಿಯಲ್ಲಿ ಮೊಸಳೆ ಇರುವ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ಫಲಕಗಳನ್ನು ಅಳವಡಿಸಿದರು ಕೆಲವರು ನದಿಗೆ ಇಳಿದು ಮೊಸಳೆ ಬಾಯಿಗೆ ಬಲಿಯಾಗುತ್ತಿದ್ದಾರೆ.