ಬೆಂಗಳೂರು: ಮೊಬೈಲ್ ಕೊಡಲು ನಿರಾಕರಿಸಿದ ಯುವಕನಿಗೆ ಚೂರಿ ಇರಿದ ಕಳ್ಳರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಣ್ಣಿನ ಅಲರ್ಜಿಗೆ ಔಷಧಿ ಖರೀದಿಸಲು ತೆರಳಿದ್ದ 22 ವರ್ಷದ ಯುವಕನಿಗೆ ಕಳ್ಳರ ಗುಂಪು ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಮೆಡಿಕಲ್‌ನಿಂದ ವಾಪಸು ಮನೆಗೆ ವಾಪಸಾಗುತ್ತಿದ್ದ ವಸೀಂ ಪಾಷಾ ಕಳ್ಳರ ತಂಡಕ್ಕೆ ತನ್ನ ಮೊಬೈಲ್ ನೀಡಲು ನಿರಾಕರಿಸಿದ್ದರಿಂದ ತಂಡವು ಚಾಕುವಿನಿಂದ ಇರಿದಿದೆ. ಚಾಮರಾಜಪೇಟೆಯ ಎಂಡಿ ಬ್ಲಾಕ್‌ನ ಮೂರನೇ ಮಹಡಿಯಲ್ಲಿ ವಾಸವಾಗಿರುವ ಪಾಷಾ ತೀವ್ರವಾಗಿ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಷಾ, ಅವರ ತಂದೆ ಮತ್ತು ಕೆಲವರು ಈ ಪ್ರದೇಶದಲ್ಲಿ ಎಲ್‌ಪಿಜಿ ಪೈಪ್‌ಗಳನ್ನು ಹಾಕುತ್ತಿದ್ದರು. ದಿನವಿಡೀ ವೆಲ್ಡಿಂಗ್ ಕೆಲಸ ಮಾಡಿ ಕಣ್ಣಿಗೆ ಅಲರ್ಜಿ ಉಂಟು ಮಾಡಿತ್ತು. ಯುವಕ ತನ್ನ ತಂದೆ ಅಬ್ದುಲ್ ಅಜೀಜ್‌ಗೆ ವಿಷಯ ತಿಳಿಸಿದ್ದಾನೆ. ಅಜೀಜ್ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ ಔಷಧಿ ಖರೀದಿಸುವಂತೆ ತಿಳಿಸಿದ್ದಾರೆ. ಅದರಂತೆ ಪಾಷಾ ಎಂಡಿ ಬ್ಲಾಕ್‌ನಲ್ಲಿರುವ ಮೆಟ್ರೋ ಮೆಡಿಕಲ್ ಸ್ಟೋರ್‌ಗೆ ಟ್ಯಾಬ್ಲೆಟ್ ಖರೀದಿಸಲು ಹೋಗಿದ್ದರು.
ಅಲ್ಲಿಂದ ಹಿಂತಿರುಗುತ್ತಿದ್ದಾಗ, ಒಬ್ಬ ವ್ಯಕ್ತಿಯು ಅವರ ಶರ್ಟ್ ಕಾಲರ್ ಅನ್ನು ಹಿಡಿದು ಮೊಬೈಲ್ ಫೋನ್ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಆದರೆ ಪಾಶಾ ನಿರಾಕರಿಸಿ, ಆತನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದನು. ಆಗ ಇನ್ನಿಬ್ಬರು ಆತನನ್ನು ಹಿಂಬದಿಯಿಂದ ಹಿಡಿದುಕೊಂಡಿದ್ದಾರೆ. ಈ ವೇಳೆ ದಾಳಿಕೋರ ಪಾಷಾ ಹೊಟ್ಟೆಗೆ ಚಾಕು ಇರಿದಿದ್ದಾನೆ. ಪಾಷಾ ಗಾಯಗಳ ನಡುವೆಯೂ ಹೋರಾಡಿದ್ದಾನೆ. ಜನರು ಬರುತ್ತಿರುವುದನ್ನು ಗಮನಿಸಿದ ದಾಳಿಕೋರರು ಪರಾರಿಯಾಗಿದ್ದಾರೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಷಾಗೆ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ಕೊಲೆ ಯತ್ನ ಮತ್ತು ದರೋಡೆ ಪ್ರಕರಣವನ್ನು ಅವರು ಕೈಗೆತ್ತಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಕೋರರನ್ನು ಹಿಡಿಯಲು ಬಲೆ ಬೀಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!