Friday, August 19, 2022

Latest Posts

ಕೇವಲ ಯೂಟ್ಯೂಬ್ ಮ್ಯೂಸಿಕ್ ನಲ್ಲಿ ಎಷ್ಟು ಮಂದಿ ಹಣ ಕೊಟ್ಟು ಹಾಡು ಕೇಳ್ತಾರೆ ಗೊತ್ತಾ?

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆರಳಂಚಿನಲ್ಲಿ ಸಿಗಲಿರುವ ಹಾಡುಗಳ ಸಂಪೂರ್ಣ ಗ್ರಂಥಾಲಯ ಯೂಟ್ಯೂಬ್ ಮ್ಯೂಸಿಕ್. ಈ ಆಪ್ ಮೂಲಕ ಹಾಡು ಕೇಳಲು ಬರೋಬ್ಬರಿ 50ಮಿಲಿಯನ್ ಮಂದಿ ಹಣ ಕೊಟ್ಟು ನೋಂದಣಿ ಮಾಡಿಕೊಂಡಿದ್ದಾರೆ.

ನೆನಪಿದೆಯಾ ಮುಂಚೆಯೆಲ್ಲಾ ನಮ್ಮ ಕೀಪ್ಯಾಡ್ ಫೋನ್ ಗಳಲ್ಲಿ ನೂರಾರು ಹಾಡುಗಳನ್ನು ಸ್ಟೋರ್ ಮಾಡಿಟ್ಟುಕೊಳ್ಳೊದೆ ನಮಗೆ ದೊಡ್ಡ ಕೆಲಸವಾಗಿತ್ತು. ಆದರೆ ಈಗ ಎಲ್ಲವೂ ಗೂಗಲ್ ನಮಗೆ ಬೆರಳಂಚಿನಲ್ಲಿ ಕೊಟ್ಟಿದೆ. ಈ ಟೆಕ್ನಾಲಜಿಗೆ ಮಾರು ಹೋಗಿರುವ ನಾವು ಸಾವಿರಾರು ರೂಪಾಯಿ ದುಡ್ಡು ಕೊಟ್ಟು ಹಾಡು ಕೇಳೋ ಹಾಗೆ ಆಗಿದೆ.

ಟ್ರಯಲ್ ಹಾಗೂ ಚಂದಾದಾರಿಕೆ ಮೂಲಕ ಯೂಟ್ಯೂಬ್ ಪ್ರೀಮಿಯಮ್ ಹಾಗೂ ಮ್ಯೂಸಿಕ್ ಗೆ 50 ಮಿಲಿಯನ್ ಮಂದಿ ಚಂದಾದಾರರಾಗಿದ್ದಾರಂತೆ. ಆದರೆ ಇದರಿಂದ ಎಷ್ಟು ಲಾಭ ಬರಲಿದೆ ಎಂಬುದರ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ಯೂಟ್ಯೂನ್ ಮ್ಯೂಸಿಕ್ ನ ಮುಖ್ಯಸ್ಥ ಲಿಯೋರ್ ಕೋಹನ್, ಹಣ ಕೊಟ್ಟು ನೋಂದಾಯಿಸಿಕೊಳ್ಳುವವರು ಹಾಗೂ ನೋಂದಣಿ ಮಾಡಿಕೊಳ್ಳುವವರು ನಮಗೆ ತುಂಬಾ ಮುಖ್ಯವಾಗಿದ್ದಾರೆ. ಪ್ರಾರಂಭದಲ್ಲಿ ಬಂದ ನೆಗೆಟಿವ್ ಕಮೆಂಟ್ಸ್ ಗಳನ್ನು ಮೆಟ್ಟಿ ಈಗ ಯೂಟ್ಯೂಬ್ ಮ್ಯೂಸಿಕ್ ವಿಶ್ವದಲ್ಲೇ ನಂಬರ್ ಒನ್ ಆಗಿದೆ ಎಂದರು.

ವಿಶ್ವದ ಶೇ.8ರಷ್ಟು ಮಂದಿ ಯೂಟ್ಯೂಬ್ ನೋಂದಣಿದಾರರಾಗಿದ್ದಾರೆ. ಈವರೆಗೆ ಕೋಟ್ಯಾಂತರ ಬಳಕೆದಾರರನ್ನು ಪಡೆದಿರುವ ಗೂಗಲ್ ತನ್ನ ಯೂಟ್ಯೂಬ್ ಮ್ಯೂಸಿಕ್ ಮೂಲಕ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪೈಡ್ ಮ್ಯೂಸಿಕ್ ಚಾನೆಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!