ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರದ ರಾಜಮಂಡ್ರಿಯಿಂದ ತಿರುಪತಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ ತಾಂತ್ರಿಕ ಸಮಸ್ಯೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಪರ್ಶ ಮಾಡಿದ್ದು ಇದರಿಂದ ಅಸಮಾಧಾನಗೊಂಡ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 10:30ಕ್ಕೆ ವಿಮಾನ ತಿರುಪತಿಯಲ್ಲಿ ಆಗಬೇಕಿತ್ತು.
ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿ ಸಿಬ್ಬಂದಿ ಸುಮಾರು 4 ರಿಂದ 5 ಗಂಟೆ ವಿಮಾನದಲ್ಲಿಯೇ ಇರಿಸಿ ಪ್ರಯಾಣಿಕರ ಪ್ರಾಣದ ಜೊತೆ ಆಟವಾಡಿದ್ದಾರೆ ಎಂದು ನಟಿ ರೋಜಾ ಆರೋಪಿಸಿದ್ದು, , ಸಿಬ್ಬಂದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಗುಡುಗಿದರು.