ಯುಗಾದಿಯಂದು ಜನ್ಮಭೂಮಿ ರಾಮಮಂದಿರ ಗರ್ಭಗೃಹ ಸ್ಥಾ‌ನದಲ್ಲಿ ಹಾರಾಡಿದೆ ಹೊಸ ಭಗವಾಧ್ವಜ

 

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ಇಂದಿನಿಂದ ಹೊಸ ಸಂವತ್ಸರ ಶುಭಕೃತ್ ಆರಂಭವಾಗಿದ್ದು, ಶ್ರೀರಾಮ ಜನ್ಮಭೂಮಿಯಲ್ಲಿಯೂ ಅದರ ಸಂಭ್ರಮ ಮನೆ ಮಾಡಿದೆ. ಜನ್ಮಭೂಮಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಗರ್ಭಗೃಹದ ಸ್ಥಾನದಲ್ಲಿ ಇಂದು ನೂತನ ಧ್ವಜವನ್ನು ಹಾರಿಸಲಾಯಿತು.

ಕಳೆದ ಒಂದುವರೆ ವರ್ಷದಿಂದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ವೇಳೆ ಗರ್ಭಗೃಹದ ಸ್ಥಾನದಲ್ಲಿ ಭಗವಾ ಧ್ವಜವನ್ನು ನೆಟ್ಟು ಕಾಮಗಾರಿ ಮುಂದುವರಿಸಲಾಗುತ್ತಿದೆ. ಪ್ರಸಕ್ತ ಜನ್ಮಭೂಮಿಯಲ್ಲಿ ಮಂದಿರದ ಅಧಿಷ್ಠಾನ (ಅಡಿಪಾಯ) ಕಾಮಗಾರಿ ನಡೆಯುತ್ತಿದೆ.

ಚೈತ್ರ ನವರಾತ್ರಿ ಮತ್ತು ನವ ಸವತ್ಸರದ ಮೊದಲ ದಿನದಂದು ಗರ್ಭಗೃಹದಲ್ಲಿ ಪೂಜೆಯನ್ನು ಮಾಡಲಾಯಿತು. ಅಲ್ಲದೇ ಗರ್ಭಗೃಹದ ಸ್ಥಾನದಲ್ಲಿದ್ದ ಹಳೆಯ ಧ್ವಜವನ್ನು ತೆಗೆದು, ಬೃಹತ್ತಾದ ತಾಮ್ರದ ಧ್ವಜಸ್ತಂಭ ನೆಟ್ಟು, ಹೊಸ ಭಗವಾ ಧ್ವಜವನ್ನು ಹಾರಿಸಲಾಯಿತು. ಕಾರ್ಮಿಕರು ಹಾಗೂ ಇಂಜಿನಿಯರ್ಸ್ ಈ ವೇಳೆ ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!