Thursday, August 11, 2022

Latest Posts

ಯುವರಾಜ್ ಸಿಂಗ್ ಫೌಂಡೇಷನ್: ಮಕ್ಕಳಿಗಾಗಿ 100 ಬೆಡ್ ಗಳ ಐಸಿಯು ಘಟಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವವರಿಗಾಗಿ ಕ್ರಿಕೆಟಿಗ ಯುವರಾಜ್ ಸಿಂಗ್ ಫೌಂಡೇಷನ್ ವತಿಯಿಂದ ಅಸ್ಸಾಂ ನ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಮಕ್ಕಳ ತೀವ್ರ ನಿಗಾ ಘಟಕ ಸ್ಥಾಪಿಸಲಿದೆ.
ಈ ಬಗ್ಗೆ ಅಸ್ಸಾಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಅಧೀಕ್ಷಕ ಡಾ. ಸಂಜೀವ್ ಕಾಕೋಟಿ ಮಾಹಿತಿ ನೀಡಿದ್ದು, ಎರಡು ತಿಂಗಳ ಹಿಂದೆ ಯುವರಾಜ್ ಸಿಂಗ್ ಫೌಂಡೇಶನ್ ವಿವಿಧ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ 1000 ಐಸಿಯು ಹಾಸಿಗೆಗಳನ್ನು ಪೂರೈಸುವ ಮಾಹಿತಿ ದೊರಕಿದ್ದು, ಇದೀಗ ಅಸ್ಸಾಂ ಆಸ್ಪತ್ರೆಯಲ್ಲಿ 100 ಹಾಸಿಗೆಗಳು ಸ್ಥಾಪನೆಯಾಗಲಿದ್ದು, ಅವುಗಳಲ್ಲಿ 20 ಬೆಡ್ ಗಳು ಪೂರ್ಣ ವೆಂಟಿಲೇಟರ್ ಹೊಂದಿರಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss