ʻಮೂರನೇ ಮಹಾಯುದ್ಧʼ ಇರುವುದಿಲ್ಲ: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಝಲೆನ್ಸ್ಕಿ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿವುಡ್‌ನಲ್ಲಿ ನಡೆದ 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಝಲೆನ್ಸ್ಕಿ ವಾಸ್ತವ ಭಾಷಣ ಮಾಡುತ್ತಾ ಮುಂದೆ ಮೂರನೇ ಯುದ್ಧ ಇರುವುದಿಲ್ಲ ಎಂಬ ಮಾತನ್ನು ಹೇಳಿದರು. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಪ್ರಾರಂಭಿಸಲಾಯಿತು ಎಂಬುದನ್ನು ಈ ಸಮಯದಲ್ಲಿ ನೆನಪಿಸಿದರು. ಅಂದ ಹಾಗೆ  ಅವರ ಭಾಷಣವನ್ನು ನೇರ ಪ್ರಸಾರ ಮಾಡಿದರು. ಈ ವೇಳೆ ಝೆಲೆನ್ಸ್ಕಿ ಅವರು ರಷ್ಯಾದೊಂದಿಗಿನ ಯುದ್ಧದ ಪರಿಸ್ಥಿತಿಯು ಅವರ ಪರವಾಗಿ ಬದಲಾಗುತ್ತಿದೆ ಮತ್ತು ಮೂರನೇ ವಿಶ್ವಯುದ್ಧ ಇರುವುದಿಲ್ಲ ಎಂಬುದಾಗಿ ಹೇಳಿದರು.

“ಮೊದಲ ಮಹಾಯುದ್ಧದಲ್ಲಿ ಲಕ್ಷಾಂತರ ಜನ, ಎರಡನೆಯ ಮಹಾಯುದ್ಧದಿಂದಾಗಿ ಕೋಟಿಗಟ್ಟಲೆ ಜನರು ಪ್ರಾಣ ಬಿಟ್ಟಿದಾರೆ. ಆದರೆ ಮೂರನೇ ಮಹಾಯುದ್ಧ ಇರುವುದಿಲ್ಲ. ಈ ಮುಕ್ತ ಪ್ರಪಂಚದ ಸಹಾಯದಿಂದ, ಉಕ್ರೇನ್ ರಷ್ಯಾದ ಆಕ್ರಮಣವನ್ನು ನಿಲ್ಲಿಸುತ್ತದೆ. ನಾವು 2023 ಕ್ಕೆ ಪ್ರವೇಶಿಸಿದ್ದೇವೆ. ಉಕ್ರೇನ್ ಯುದ್ಧ ಇನ್ನೂ ಮುಗಿದಿಲ್ಲ. ಅದೃಷ್ಟವಶಾತ್, ಯುದ್ಧವು ನಮ್ಮ ಪರವಾಗಿ ನಿಂತಿದೆ ಎಂದರು.

ಉಕ್ರೇನ್‌ನ ಸ್ವಾತಂತ್ರ್ಯವನ್ನು ಬೆಂಬಲಿಸಿದವರಿಗೆ ಝಲೆನ್ಸ್ಕಿ ಧನ್ಯವಾದ ಅರ್ಪಿಸಿದರು. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಬದುಕುವ ಹಕ್ಕು ಮತ್ತು ಪ್ರೀತಿಸುವ ಹಕ್ಕಿಗಾಗಿ ನಾವು ಎಲ್ಲರ ಹೋರಾಟದಲ್ಲಿ ಏಕತೆಯನ್ನು ಸಾಧಿಸುತ್ತಿದ್ದೇವೆ. ನಾವು ಮುಕ್ತ ಜಗತ್ತನ್ನು ನಿರ್ಮಿಸುತ್ತೇವೆ ಮತ್ತು ಉಕ್ರೇನ್ ವಿಜಯದ ದಿನದಂದು ಎಲ್ಲರೂ ನಮ್ಮನ್ನು ಬೆಂಬಲಿಸುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!