ರಷ್ಯಾ ದಾಳಿಗೆ ಈವರೆಗೆ 1,300 ಉಕ್ರೇನ್‌ ಸೈನಿಕರ ಬಲಿದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಷ್ಯಾದ ನಿರಂತರ ದಾಳಿ ವಿರೋಧಿಸಿ ಹೋರಾಡುತ್ತಿರುವ ಉಕ್ರೇನ್‌ ಸೈನಿಕರು ಧೈರ್ಯದಿಂದ ಹೋರಾಡುತ್ತಿದ್ದು, ಈವರೆಗೆ ಸುಮಾರು 1300 ಉಕ್ರೇನ್‌ ಸೈನಿಕರು ಹೋರಾಟದಲ್ಲಿ ಬಲಿಯಾಗಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಷ್ಯಾ ಉಕ್ರೇನ್‌ ನ ರಾಜಧಾನಿ ಕೀವ್‌ ಮೇಲೆ ತನ್ನ ಆಕ್ರಮಣ ಶುರು ಮಾಡಿದ್ದು, ನಗರವನ್ ತನ್ನ ವಶಕ್ಕೆ ಪಡೆಯಲು ಮುಂದಾಗಿದೆ. ಆದರೆ ಕೀವ್‌ ನಗರವನ್ನು ರಷ್ಯಾ ನಾಶಪಡಿಸಿದರೆ, ಅಲ್ಲಿನ ಐತಿಹಾಸಿಕ ನೆನಪುಗಳು, ಕೈವಾನ್‌ ರುಸ್‌ ಇತಿಹಾಸವನ್ನು ನಾಶಪಡಿಸಿದಂತಾಗುತ್ತದೆ ಎಂದರು.

ಇನ್ನು ಉಕ್ರೇನ್‌ ನ ದಕ್ಷಿಣ ಭಾಗದಲ್ಲಿರುವ ಮರಿಯುಪೋಲ್‌ ನಗರದ ಮೇಲೆ ರಷ್ಯಾ ಎಡೆಬಿಡದೆ ದಾಳಿ ನಡೆಸುತ್ತಿದ್ದು, ಈ ಪ್ರದೇಶದಲ್ಲಿ ಕಳೆದ 12 ದಿನಗಳ್ಲಿ 1582 ಜನ ಮೃತಪಟ್ಟಿದ್ದಾರೆ.

ರಷ್ಯಾ ದಾಳಿಗೆ ಈವರೆಗೆ 49 ಮಕ್ಕಳು ಸೇರಿದಂತೆ 579 ನಾಗರಿಕರು ಬಲಿಯಾಗಿದ್ದು, 54 ಮಕ್ಕಳು ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಜನ ಗಂಭೀರಗಾಯಗೊಂಡಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!