ಝಿಕಾ ಭೀತಿ : 21 ಗರ್ಭಿಣಿಯರ ಪರೀಕ್ಷಾ ವರದಿ ನೆಗೆಟಿವ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರಿನಲ್ಲಿ ಕಳೆದ ವಾರ ಬಾಲಕಿಯೊಬ್ಬಳಿಗೆ ಝಿಕಾ ವೈರಸ್ ದೃಢಪಟ್ಟಿದ್ದು, ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 21 ಗರ್ಭಿಣಿಯರಿಗೆ ನಡೆಸಿದ ಝಿಕಾ ವೈರಸ್ ಪರೀಕ್ಷಾ ವರದಿ ನೆಗೆಟಿವ್ ಆಗಿದ್ದು, ಆರೋಗ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.
ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದ್ದು, ಇನ್ನೂ ವರದಿಗಳು ಬರುವುದು ಬಾಕಿ ಇದೆ.
ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪ್ರಕರಣ ಕಾಣಿಸುತ್ತಿದ್ದಂತೆಯೇ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು, ರೋಗ ಹರಡುವಿಕೆ ತಡೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಇದೀಗ ಗರ್ಭಿಣಿಯರ ಪರೀಕ್ಷೆ ವರದಿ ಕೂಡ ನೆಗೆಟಿವ್ ಬಂದಿದೆ.
ಗರ್ಭಿಣಿಯರು ಝಿಕಾಗೆ ತುತ್ತಾದರೆ ಹುಟ್ಟುವ ಮಕ್ಕಳಲ್ಲಿ ಗಂಭೀರವಾದ ದೋಷಗಳು ಅಥವಾ ಗರ್ಭಪಾತದ ಅಪಾಯ ಹೆಚ್ಚಿದೆ. ಈ ಕಾರಣದಿಂದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!