spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಿಪ್ ಹಾಕಲಾಗದೇ ಒದ್ದಾಡುತ್ತಿದೆ ಅಮೆರಿಕ!

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಕಾಲಘಟ್ಟದಲ್ಲಿ ಜಗತ್ತಿನ ಪೂರೈಕೆ ವ್ಯವಸ್ಥೆಯೇ ಅಸ್ತವ್ಯಸ್ತವಾಗಿರುವುದು ಗೊತ್ತಿರುವ ಸಂಗತಿ. ಇದರ ಪರಿಣಾಮಗಳು ಯಾವ ತೆರನಾಗಿವೆ ಎಂಬುದಕ್ಕೆ ಅಮೆರಿಕ ಅರ್ಥವ್ಯವಸ್ಥೆಯನ್ನು ನೋಡಬಹುದು. ಬಹಳಷ್ಟು ಚಿಕ್ಕಪುಟ್ಟ ವಿಷಯಗಳಲ್ಲಿ ಅದು ಪೂರೈಕೆ ವ್ಯತ್ಯಯವನ್ನು ಅನುಭವಿಸುತ್ತಿದೆ. 

ಮನೆ ಎದುರಿಗೋ, ವಿಹಾರಕ್ಕೆ ಹೋಗುವಲ್ಲೋ ಟೆಂಟ್ ಹಾಕುವುದು ಅಮೆರಿಕದ ಜನಜೀವನದಲ್ಲಿ ಸಾಮಾನ್ಯ. ಹೀಗಾಗಿ ನಮ್ಮಲ್ಲಿ ಮಳೆಗಾಲದ ಛತ್ರಿಗಳು ಬಿಕರಿಯಾದಂತೆ ಅಲ್ಲಿ ಟೆಂಟ್ ಗಳು ಮಾರಾಟವಾಗುತ್ತವೆ. ಆದರೀಗ ಹೀಗೆ ಟೆಂಟ್ ನಿರ್ಮಿಸುವವರ ಬಳಿ ದಾಸ್ತಾನುಗಳು ಹಾಗೆಯೇ ಬಿದ್ದುಕೊಂಡಿವೆ. ಏಕೆಂದರೆ ಟೆಂಟ್ ಪೂರ್ಣರೂಪಕ್ಕೆ ಬರುವಲ್ಲಿ ಜಿಪ್ ಹಾಕುವ ವ್ಯವಸ್ಥೆ ಇರಬೇಕಲ್ಲ, ಅದಕ್ಕೆ ಜಿಪರ್ ಸಿಗುತ್ತಿಲ್ಲ. ಇನ್ನು ಹಲವು ಉತ್ಪಾದಕರಿಗೆ ಟೆಂಟ್ ನೊಳಗೆ ತೂರಿಸಿ ಅದನ್ನು ಎದ್ದುನಿಲ್ಲಿಸುವ ಅಲ್ಯುಮಿನಿಯಂ ಕೋಲುಗಳು ಸಿಗದೇ ಅರ್ಧಕ್ಕೇ ಕೆಲಸ ನಿಂತಿದೆ.

ಕೆಲವು ಲೋಹಗಳು, ಪ್ಲಾಸ್ಟಿಕ್, ಕಟ್ಟಿಗೆ, ಗ್ಲಾಸ್ ಇವೆಲ್ಲ ವಿಭಾಗಗಳಲ್ಲಿ ಅಮೆರಿಕದ ಉದ್ದಿಮೆಗಳು ಕೊರತೆಯನ್ನು ಎದುರಿಸುತ್ತಿವೆ. 

ಜಿಪರ್ ವಿಷಯಕ್ಕೆ ಬರುವುದಾದರೆ, ಇದರ ಅನ್ವೇಷಣೆ ಆದದ್ದೇ ಅಮೆರಿಕದಲ್ಲಿ. 1960ರವರೆಗೆ ಅಮೆರಿಕ ಕಂಪನಿಗಳೇ ಇದರಲ್ಲಿ ಪ್ರಾಬಲ್ಯ ಮರೆದವಾದರೂ ಈಗ ಜಿಪ್ ತಯಾರಿಕೆಯ ಹಿಡಿತ ಇರುವುದು ಜಪಾನ್ ಮತ್ತು ಚೀನಾ ಕಂಪನಿಗಳಲ್ಲಿ. ಇಲ್ಲಿ ಉಂಟಾಗುವ ಯಾವುದೇ ಪೂರೈಕೆ ವ್ಯತ್ಯಯ ಅಮೆರಿಕವನ್ನು ಕಾಡುತ್ತದೆ. 

ಜಾಕ್ ಡೇನಿಯಲ್ಸ್ ಹಾಗೂ ವುಡ್ಫೋರ್ಡ್ ರಿಸರ್ವ್ ಥರದ ಅಮೆರಿಕದ ವಿಸ್ಕಿ ಬ್ರಾಂಡುಗಳಿಗೂ ಸಂಕಷ್ಟ ಬಂದಿದೆ. ಮದ್ಯದ ಉತ್ಪಾದನೆಯೇನೋ ಸಾಂಗವಾಗಿ ಸಾಗಿದೆ. ಆದರೆ ಗಾಜಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಇವುಗಳ ಬಾಟಲಿಗಳ ನಿರ್ಮಾಣ ಅಂದುಕೊಂಡ ಪ್ರಮಾಣದಲ್ಲಿ ಆಗುತ್ತಿಲ್ಲ. ಇನ್ನು, ಅಲುಮಿನಿಯಂ ಪೂರೈಕೆಯಲ್ಲೂ ವ್ಯತ್ಯಯವಾಗಿರುವುದರಿಂದ ಬಿಯರ್ ಟಿನ್ನುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. 

ಹೀಗಾಗಿ ಸರಾಗವಾಗಿ ಪೆಗ್ ಏರಿಸಲಾಗದ, ಜಿಪ್ ಎಳೆಯಲಾಗದ ಕಿರಿಕಿರಿಯಲ್ಲಿ ಅಮೆರಿಕವಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss