Wednesday, June 29, 2022

Latest Posts

ಕಾರು- ಬೈಕ್‌ ನಡುವೆ ಭೀಕರ ರಸ್ತೆ ಅಪಘಾತ; ಜೊಮ್ಯಾಟೋ ಬಾಯ್‌, ಇಬ್ಬರು ಯುವತಿಯರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೆಹಲಿಯ ಈಶಾನ್ಯ ಭಾಗದಲ್ಲಿರುವ ಶಕರ್‌ಪುರ ಪ್ರದೇಶದಲ್ಲಿ ಬೈಕ್‌ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಪಘಾತದಲ್ಲಿ ಜೊಮಾಟೊ ಡೆಲಿವರಿ ಬಾಯ್‌ ಹಾಗೂ ಇಬ್ಬರು ಹದಿಹರೆಯದ ಯುವತಿಯರು ಮೃತಪಟ್ಟಿದ್ದಾರೆ.
ಜ್ಯೋತಿ (17) ಮತ್ತು ಭಾರತಿ (19) ಮೃತಪಟ್ಟ ದುರ್ದೈವಿಗಳು. ಯುವತಿಯರು ಮತ್ತು ಅವರ ಕುಟುಂಬದ ಇತರ ಐವರು ಪಶ್ಚಿಮ ದೆಹಲಿಯ ಪೀರಾಗರ್ಹಿಯಿಂದ ಕರ್ಕರ್ಡೂಮಾದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು. ಕಾರಿನ ಮುಂಬದಿಯಲ್ಲಿ ಮೂವರು ಕುಳಿತಿದ್ದರೆ, ನಾಲ್ವರು ಹಿಂದೆ ಕುಳಿತಿದ್ದರು. ಈ ವೇಳೆ ಕಾರು ಲಕ್ಷ್ಮಿನಗರದಲ್ಲಿ ಹಾದು ಹೋಗುತ್ತಿದ್ದಾಗ ಝೊಮ್ಯಾಟೋ ಡೆಲಿವರಿ ಬಾಯ್ ಬೈಕ್ ಅಡ್ಡ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಬೈಕ್‍ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನೊಳಗೆ ಸಿಲುಕಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಇಬ್ಬರು ಯುವತಿಯರು ಮೃತಪಟ್ಟರು. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನು 10 ನಿಮಿಷದಲ್ಲಿ ತಲುಪಿಸುವುದಾಗಿ ಝೊಮ್ಯಾಟೋ ಘೋಷಿಸಿದ ಒಂದು ತಿಂಗಳಲ್ಲೇ ಈ ರೀತಿಯಾದ ಭೀಕರ ಅನಾಹುತ ಸಂಭವಿಸಿದೆ. ನಿಗದಿತ ಸಮಯಕ್ಕೆ ಆರ್ಡರ್ ತಲುಪಿಸುವ ಧಾವಂತದಲ್ಲಿ ರ್ಯಾಶ್‌ ಡೈವಿಂಗ್‌ ನಿಂದ ಅಪಘಾತಗಳು ಹಾಗೂ ಡೆಲಿವರಿ ಬಾಯ್ಗಳ ಸುರಕ್ಷತೆಯ ಬಗ್ಗೆ ಆತಂಕಗಳನ್ನು ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss