ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ: 35 ಪ್ರಕರಣಗಳು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದಾದ್ಯಂತ ಕೊರೊನಾವನ್ನು ಹರಡಿರುವ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಬೆಳಕಿಗೆ ಬಂದಿದೆ. ಕೋವಿಡ್ ವೈರಸ್ ನಂತರ, ಅನೇಕ ರೀತಿಯ ವೈರಸ್‌ಗಳು ಜಗತ್ತನ್ನು ಬಾಧಿಸುತ್ತಿವೆ. ಹಿಂದೆಂದೂ ಇಷ್ಟೊಂದು ವೈರಸ್‌ಗಳು ಸಾಮೂಹಿಕ ದಾಳಿ ನಡೆಸಿದ ದಾಖಲೆಗಳು ಕಂಡಿಲ್ಲ. ಆದರೆ ಚೀನಾದಿಂದ ಕೋವಿಡ್ ಹರಡಿದ ನಂತರ, ಹಲವಾರು ರೀತಿಯ ವೈರಸ್‌ಗಳು ಬೆಳಕಿಗೆ ಬರುತ್ತಿವೆ. ಮತ್ತೊಂದು ‘ಲಂಗ್ಯಾ ಹೆನಿಪಾ’ ವೈರಸ್‌ಗೆ ಚೀನಾ ಜನ್ಮ ನೀಡಿದೆ.

ತೈವಾನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಈ ವೈರಸ್ 35 ಜನರಿಗೆ ಸೋಂಕು ತಗುಲಿದೆ ಎಂದು ಬಹಿರಂಗಪಡಿಸಿದೆ. ಶಾಂಡೊಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ವೈರಸ್ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತೈವಾನ್ ಮೂಲದ ಸಿಡಿಸಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಚುವಾಂಗ್ ಝೆನ್ಕ್ಸಿಯಾಂಗ್ ಮಾತನಾಡಿ, ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು, ಅಲ್ಲಿಯವರೆಗೂ ಜನರು ಜಾಗೃತರಾಗಬೇಕು. ಸಾಕು ಪ್ರಾಣಿಗಳ ಮೇಲೆ ನಡೆಸಿದ ಸೆರೋಲಾಜಿಕಲ್ ಸಮೀಕ್ಷೆಯಲ್ಲಿ ಅಧಿಕಾರಿಗಳು ಮೇಕೆ ಮತ್ತು ನಾಯಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರು. ಪರಿಣಾಮವಾಗಿ, 2% ಆಡುಗಳು ಮತ್ತು 5% ನಾಯಿಗಳಲ್ಲಿ ವೈರಸ್ ಪಾಸಿಟಿವ್ ಎಂದು ಕಂಡುಬಂದಿದೆ. 27% ಇಲಿಗಳಲ್ಲಿ ವೈರಸ್‌ನ ಲಕ್ಷಣಗಳು ಕಂಡುಬಂದಿವೆ.

35 ಜನರಲ್ಲಿ ಲಾಂಗ್ಯಾ ಹೆನಿಪಾ ವೈರಸ್ ಪಾಸಿಟಿವ್
ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಇರುವುದು ಬೆಳಕಿಗೆ ಬಂದಿದೆ. ಎಚ್ಚೆತ್ತ ಅಧಿಕಾರಿಗಳು ಪರೀಕ್ಷೆ ನಡೆಸಿದ್ದು, 35 ಮಂದಿಗೆ ಲಾಂಗ್ಯಾ ಹೆನಿಪಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದರೆ ಅವರು ಪರಸ್ಪರ ನಿಕಟ ಸಂಬಂಧವನ್ನು ಹೊಂದಿಲ್ಲ. ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಿಡಿಸಿ ಉಪ ಡಿಜಿ ಹೇಳಿದ್ದಾರೆ.

ವೈರಸ್‌ನ ಲಕ್ಷಣಗಳು
ವೈರಸ್ ಸೋಂಕಿತ 26 ಜನರಲ್ಲಿ, ರೋಗಿಗಳು ಜ್ವರ, ಸುಸ್ತು, ಕೆಮ್ಮು, ಹಸಿವಿನ ಕೊರತೆ, ಸ್ನಾಯು ನೋವು, ವಾಕರಿಕೆ, ತಲೆನೋವು, ವಾಂತಿ ಮತ್ತು ಇತರ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವುದರ ಜತೆಗೆ ಯಕೃತ್, ಕಿಡ್ನಿ ವೈಫಲ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!